ಮದ್ಯಪಾನ ನಿಷೇಧಕ್ಕೆ ಒತ್ತಾಯ
ಶಿವಮೊಗ್ಗ: ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿದಂತೆ ಮದ್ಯಪಾನ ನಿಷೇಧವನ್ನು ಕೂಡ ಜಾರಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ, ಅಬಕಾರಿ ನೀತಿಯನ್ನು ಪುನರ್ ವಿಮರ್ಶಿಸಬೇಕು ಹಾಗೂ ಹೊಸ ಬಾರ್ಗಳಿಗೆ ಪರವಾನಿಗೆಯನ್ನು ನೀಡಬಾರದು. ಈಗಾಗಲೇ ನೀಡಿದ ಲೈಸೆನ್ಸ್ಗಳನ್ನು ಕಡಿತಗೊಳಿಸಿ ಮದ್ಯಪಾನ ನಿಷೇಧಕ್ಕೆ ಪ್ರಯತ್ನಿಸಬೇಕು ಎಂದರು. ವಿವಿಧ ಯೋಜನೆಗಳಲ್ಲಿ ಆದ್ಯತೆಯ ಮೇರೆಗೆ ಸೌಲಭ್ಯಗಳನ್ನು ನೀಡಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಹಕ್ರೆ ಎಚ್ಚರಿಸಿದ್ದಾರೆ.