ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭದ್ರಾ ಜಲಾಶಯ: ನೀರು ಹೆಚ್ಚಳ

Rashmi Kasaragodu
Updated On : 30 Jun 2013, 12:28 pm

ಶಿವಮೊಗ್ಗ: ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ ಒಂದು ಅಡಿ ನೀರು ಸಂಗ್ರಹವಾಗಿದೆ. ಆದರೆ ಒಳಹರಿವಿನಲ್ಲಿ ಇಳಿಕೆಯಾಗಿದೆ. ತೀರ್ಥಹಳ್ಳಿ 2 ಸೆ.ಮೀ., ತಾಳಗುಪ್ಪ, ಹೊಸನಗರ, ಶಿರಾಳಕೊಪ್ಪ 1 ಸೆ.ಮೀ. ಮಳೆಯಾಗಿದೆ. ಆದರೆ ಜಿಲ್ಲೆಯ ಒಳನಾಡಿನಲ್ಲಿ ಮಳೆ ಇಳಿಕೆಯಾಗಿದೆ. ತುಂಗಾ ಜಲಾಶಯದಲ್ಲಿ ಒಳಹರಿವು ಏರಿಕೆಯಾಗಿದ್ದು, 17 ಸಾವಿರ ಕ್ಯುಸೆಕ್ ದಾಟಿತ್ತು. ಅಣೆಕಟ್ಟು ಭರ್ತಿಯಾಗಿರುವುದರಿಂದ ಇಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ಹೊಸಪೇಟೆಯ ತುಂಗಭದ್ರಾ ಜಲಾಶಯ ಸೇರುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement