ಕಾಲೇಜು ಪ್ರವೇಶಕ್ಕೆ ಅರ್ಹತಾ ಪರೀಕ್ಷೆ
ಶಿವಮೊಗ್ಗ: ಡೆಹರಾಡೂನ್ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿಗೆ ಪ್ರವೇಶ ಪಡೆಯಲು ಡಿಸೆಂಬರ್ 1ಮತ್ತು 2ರಂದು ಬೆಂಗಳೂರಿನಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ.
ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 7ನೇ ತರಗತಿಯಲ್ಲಿ ಉತ್ತೀರ್ಣ ಅಥವಾ ಓದುತ್ತಿರುವವರಾಗಿದ್ದು, 13ವರ್ಷ ವಯೋವುತಿಯೊಳಗಿನವರಾಗಿರಬೇಕು. ಮಾದರಿ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ಕೋರಿಕೆ ಪತ್ರದ ಮೇರೆಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, 58, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಇವರಿಂದ ಪಡೆಯಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ವಿವರಗಳಿಗಾಗಿ- 080- 25589459
ಅರ್ಜಿ ಆಹ್ವಾನ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾ ಪ್ರದೇಶದ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಸಹಾಯಕಿಯರ 19 ಹುದ್ದೆಗೆ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲಿಚ್ಚಿಸುವ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಗ್ಯಾರೇಜ್ ಕ್ಯಾಂಪ್, ಹುಣಸೇಕಟ್ಟೆ-1, ಕಲ್ಲಿಹಾಳ್, ಬೊಮ್ಮನಕಟ್ಟೆ, ದಾಸರ ಕಲ್ಲಳ್ಳಿ, ನಾಗತಿಬೆಳಗಲು ತಾಂಡ, ಶಿವಪುರ, ಗುಡ್ಡದಮ್ಮನಹಳ್ಳಿ, ತಡಸ-1, ಯಡೇಹಳ್ಳಿ ಕ್ಯಾಂಪ್, ಸಿದ್ದಾಪುರ ತಾಂಡ, ಹೊಸಸಿದ್ದಾಪುರ ಹಾಗೂ ಸುಣ್ಣದಹಳ್ಳಿ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿನ 12 ಕಾರ್ಯಕರ್ತೆಯರ ಹುದ್ದೆಗೆ, ಸಿದ್ದರಮಟ್ಟಿ ಮಿನಿ ಅಂಗನವಾಡಿ ಕೇಂದ್ರದ ಒಂದು ಮಿನಿ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಹಾಗೂ ಕೂಡ್ಲಿಗೆರೆ-1 ಮತ್ತು 2, ಶ್ರೀನಿವಾಸಪುರ, ಮಸರಹಳ್ಳಿ, ಕಾಗೇಕೊಡಮಗ್ಗೆ, ಮಂಡ್ಯಕ್ಯಾಂಪ್, ಕನಸಿನಕಟ್ಟೆ, ಹಾತಿಕಟ್ಟೆ, ಸೀತಾರಾಂಪುರ, ಶ್ರೀರಾಮನಗರ-1, ತಿಮ್ಲಾಪುರ, ಯಡೇಹಳ್ಳಿ-3, ಅಂಬೇಡ್ಕರ್ ಸರ್ಕಲ್, ಖಾಜಿಮೊಹಲ್ಲ-1, ಅನ್ವರ್ ಕಾಲೋನಿ-2, ಎನ್.ಎಂ.ಸಿ.-2, ವಿಶ್ವೇಶ್ವರಯ್ಯ ನಗರ, ಕುವೆಂಫು ನಗರ ಮತ್ತು ಹೊಸಸಿದ್ದಾಪುರ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿಚ್ಚಿಸುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. 18ರಿಂದ 44ವರ್ಷ ವಯೋವುತಿಯೊಳಗಿನವರಾಗಿರಬೇಕು. ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಹಾಗೂ ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿಯನ್ನು ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ (ಕೃಷಿ ಇಲಾಖೆ ಹಿಂಭಾಗ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಜುಲೈ 26ರೊಳಗಾಗಿ ಸಲ್ಲಿಸಬೇಕು. ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು.