ಇಂದು ಥ್ರೋಬಾಲ್ ಪಂದ್ಯಾವಳಿ
ಜೋಗ್ಫಾಲ್ಸ್: ಕೆಪಿ.ಸಿ ಮಹಿಳಾ ಉದ್ಯೋಗಿಗಳ ಸಂಘ ಮತ್ತು ಶರಾವತಿ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿಯನ್ನು ದಿ.02-03-2013 ರ ಶನಿವಾರ ಬೆಳಗ್ಗೆ 11 ಗಂಟೆಗೆ ಜೋಗದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಒಂದು ತಂಡಕ್ಕೆ ಪ್ರವೇಶ ಶುಲ್ಕ ರು. 150 ನಿಗದಿಗೊಳಿಸಿದ್ದು, ಭಾಗವಹಿಸುವ ಆಸಕ್ತ ತಂಡಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಘದ ಸದಸ್ಯರು ತಿಳಿಸಿದ್ದಾರೆ. ಮಾಹಿತಿಗಾಗಿ ಪೂರ್ಣಿಮಾ ಗಿಡ್ಡಪ್ಪ ಗೌಡ ಮೊ. 9449204634, 9449400353, 9008956184, 9482204318 ಸಂಪರ್ಕಿಸಲು ಕೋರಲಾಗಿದೆ.