ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಕನ್ನಡಪ್ರಭ ವಾರ್ತೆ, ಶಿವಮೊಗ್ಗ ಮಾ. 1 ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಗಾಜನೂರು ಬಳಿ ತುಂಗಾಪೀಠದ ಕ್ರಾಸ್ ಬಳಿ ನಡೆದಿದೆ.
ಗೋವಿಂದರಾಜು ಮೃತಪಟ್ಟ ಬೈಕ್ ಸವಾರ. ಇವರು ಶಿವಮೊಗ್ಗದಲ್ಲಿ ಕೆಇಬಿಯ ಲೈನ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬೈಕ್ನಲ್ಲಿ ಬರುತ್ತಿರುವಾಗ ವೇಗವಾಗಿ ಬಂದ ಮರಳು ಲಾರಿ ಇವರಿಗೆ ಡಿಕ್ಕಿ ಹೊಡೆದಿದ್ದರಿಂದ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.