ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೇವಾಲಯಗಳು ಸಂಸ್ಕೃತಿಯ ಪ್ರತೀಕ

Mainashree
Updated On : 3 Mar 2013, 12:17 pm

ಜೋಗ್‌ಫಾಲ್ಸ್: ಶಿಥಿಲಾವಸ್ಥೆಯಲ್ಲಿರುವ ಊರಿನ ದೇವಾಲಯಗಳು ಜೀರ್ಣೋದ್ಧಾರಗೊಂಡಾಗ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ. ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ಮನೆ- ಮನಗಳಲ್ಲಿ ನೆಮ್ಮದಿ  ಕಾಣಬೇಕಾದರೆ ಅದು ದೇವಾಲಯಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ಹಿರೇಮನೆಯಲ್ಲಿನ ಗಂಗಾವಿಶ್ವೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸಿ ನೆರೆದಿದ್ದ  ಭಕ್ತಾಧಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಜೀರ್ಣೋದ್ಧಾರಕ್ಕೆ ಸಹಾಯ: ಮೊದಲು ನಮ್ಮ ಮನೆಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಾಗಿದೆ. ಅದು ನಂತರ ಊರಿಗೆ ಪಸರಿಸಿ ನಂತರ ವಿಶ್ವದೆಲ್ಲೆಡೆಗೂ ವ್ಯಾಪಿಸುತ್ತದೆ. ಆ ಕಾರಣಕ್ಕಾಗಿ ಶಿಥಿಲಗೊಂಡ ದೇವಾಲಯಗಳ ಜೀರ್ಣೋದ್ಧಾರವಾಗಬೇಕಿದೆ. ಅದರೊಂದಿಗೆ ಊರಿನ ಸಮೂಹವೂ ಅಭಿವೃದ್ಧಿಯಾಗುತ್ತದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ತಮ್ಮ  ಸಹಾಯಹಸ್ತ, ಬೆಂಬಲ ಸದಾ ಇರುತ್ತದೆ ಎಂದರು.
ಮೂಗಿಮನೆ ಗಣಪತಿ ಹೆಗಡೆ, ಬಾಲಚಂದ್ರ, ಶಾಂತಾರಾಮ್ ಮತ್ತಿತರರು ಹಾಜರಿದ್ದರು. ಮಗ್ಗೇಕಾಯಿ ಬೀಜ, ಪೆನ್ಸಿಲ್ ವೇಸ್ಟ್, ಸಾಸಿವೆಕಾಳು, ಕಸವಾಗುವ ನಿರುಪಯುಕ್ತ ವಸ್ತುಗಳನ್ನು ಬಳಸಿ ಆರತಿ ತಟ್ಟೆಗಳನ್ನು ಪ್ರರ್ದಶಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement