ರಸ್ತೆ ಅಪಘಾತ: ಬೈಕ್ ಸವಾರ ಸಾವು
ಕನ್ನಡ ಪ್ರಭ ವಾರ್ತೆ, ಶಿವಮೊಗ್ಗ, ಮಾ.2
ಬೈಕ್ ಮತ್ತು ಲಗೇಜ್ ಆಟೋ ನಡುವೆ ಸಂಭಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶರಾವತಿ ನಗದಲ್ಲಿ ನಡೆದಿದೆ. ರಾಜಶೇಖರ್ ಮೃತಪಟ್ಟ ಬೈಕ್ ಸವಾರ. ಇವರು ಬೈಕ್ನಲ್ಲಿ ಶರಾವತಿ ನಗರದ ಹತ್ತಿರ ಬರುತ್ತಿರುವಾಗ ವೇಗವಾಗಿ ಬಂದ ಲಗೇಜ್ ಆಟೋ ಡಿಕ್ಕಿ ಹೊಡೆದಿದ್ದರಿಂದ ರಾಜಶೇಖರ್ ಮೃತಪಟ್ಟಿದ್ದಾರೆ. ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.
ಚಿನ್ನಾಭರಣ ಕಳವು
ಶಿವಮೊಗ್ಗ: ನಗರದ ಸಿ.ಎಸ್. ರಾಮಣ್ಣ ರಸ್ತೆಯಲ್ಲಿನ ಮನೆಯೊಂದರಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಅಪಹರಿಸಿರುವ ಘಟನೆ ನಡೆದಿದೆ. ಡಾ.ಪಿ.ಕೆ. ಲಕ್ಷ್ಮೀನಾರಾಯಣ (70) ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸುಮಾರು ರು. 2 ಲಕ್ಷ ಮೌಲ್ಯದ ಚಿನ್ನಾಭರಣಗಳ ಕಳವು ಮಾಡಲಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಖೋಟಾನೋಟು
ಶಿವಮೊಗ್ಗ: ಇಲ್ಲಿನ ತಿಲಕನಗರ ಶಾಖೆಯ ಸ್ಟೇಟ್ಬ್ಯಾಂಕ್ ಆಫ್ ಇಂಡಿಯ ಬ್ಯಾಂಕ್ನಲ್ಲಿ ಕೆಲವರು ಖೋಟಾನೋಟು ಚಲಾವಣೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಂಕ್ನಲ್ಲಿ ಗಣೇಶ್ ಹಾಗೂ ಇತರೆ 18 ಜನ ವ್ಯಕ್ತಿಗಳು 500ರ 14 ನೋಟುಗಳು, ರು. 1 ಸಾವಿರ ಮೌಲ್ಯದ 5 ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು ಬೆಳಕಿಗೆ ಬಂದಿದೆ. ಶಾಖೆಯ ಮುಖ್ಯಸ್ಥ ಎಂ.ಎಸ್. ಶೆಣೈ ದೂರು ನೀಡಿದ್ದಾರೆ.