ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿದ್ಯುತ್ ಕಡಿತ ವಿರೋಧಿಸಿ ಪ್ರತಿಭಟನೆ

Mainashree
Updated On : 3 Mar 2013, 12:18 pm

ಕನ್ನಡಪ್ರಭವಾರ್ತೆ, ಹರಿಹರ, ಮಾ.2
ಗ್ರಾಮಾಂತರ ಪ್ರದೇಶಗಲ್ಲಿ ನೀಡುತ್ತಿದ್ದ 12 ಗಂಟೆಗಳ ವಿದ್ಯುತ್ ಪೂರೈಕೆ ಬದಲು ಮಾ.1ರಿಂದ ಕೇಲವ 6 ಗಂಟೆ ವಿದ್ಯುತ್ ಪೂರೈಕೆ ಮಾಡುವ ನೀತಿ ಜಾರಿಗೆ ಗೊಳಿಸಿದ ಕಾರಣ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬೆಸ್ಕಾಂ ಕಚೇರಿಗೆ ಎರಡನೇ ದಿನವಾದ ಶನಿವಾರವೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ನೀಡುತ್ತಿದ್ದ 12 ಗಂಟೆಗಳ ವಿದ್ಯುತ್ ಪೂರೈಕೆ ಕಡಿತಗೊಳಿಸಿದ ಕಾರಣ ತಾಲೂಕಿನ ಬಿಳಸನೂರು, ನಂದಿಗಾವಿ, ಎರೆಹೊಸಳ್ಳಿ, ಕೆ. ಬೇವಿನಹಳ್ಳಿ, ಹಲಸಬಾಳು, ದೂಳೆಹೊಳೆ, ರಾಜನಹಳ್ಳಿ, ತಿಮ್ಲಾಪುರ, ಹರಗನಹಳ್ಳಿ, ಹನಗವಾಡಿ, ಕುಣಿಬೆಳಕೆರೆ, ಸಿರಿಗೆರೆ ಮುಂತಾದ ಭಾಗಗಳಿಂದ ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿದ ನೂರಾರು ರೈತರು ಪ್ರತಿಭಟನೆಗೆ ಮುಂದಾದರು. ಸುದ್ದಿ ತಿಳಿಯುತ್ತಿಂತೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಬಿ.ಪಿ. ಹರೀಶ್ ರೈತರಿಗೆ ಸಹಮತ ನೀಡಿದರು.
ರೈತರಿಗೆ ಅನ್ಯಾಯ: ರೈತ ಸಂಘದ ರಾಜ್ಯ ಸಂಚಾಲಕ ಎಚ್. ಓಂಕಾರಪ್ಪ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ರೈತರ ಮೇಲೆ ಪ್ರಮಾಣ ವಚನ ಮಾಡಿ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಅಧಿಕಾರಕ್ಕೆ ಬಂದ ಸರ್ಕಾರ ನೀಡುತ್ತಿದ್ದ ವಿದ್ಯುತ್ ಪ್ರಮಾಣವನ್ನು ಮೊಟುಕುಗೊಳಿಸುತ್ತಾ ರೈತರ ಬದುಕಿನೊಂದಿಗೆ ಚಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಹಿಂದೆ 18 ಗಂಟೆಗಳ ಕಾಲ ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಕಾಲಕ್ರಮೇಣ 15 ಗಂಟೆಗಳಿಗೆ ಕುಸಿದು ಪ್ರಸ್ತುತ ವರ್ಷ 12 ತಾಸುಗಳ ವಿದ್ಯುತ್ ನೀಡುತ್ತಿತ್ತು. ಆದರೆ ಇದ್ದಕಿದ್ದಂತ ಬೆಸ್ಕಾಂ ವಿಭಾಗಕ್ಕೆ 6 ಗಂಟೆಗಳ ಕಾಲ ವಿದ್ಯುತ್ ವಿತರಣೆ ಮಾಡುವ ಏಕಾಏಕಿ  ನಿರ್ಧಾರ ತಳೆಯುವ ಮೂಲಕ ರೈತರ ಬೆನ್ನಿಗೆ ಚೂರಿ ಹಾಕಿದೆ ಎಂದು ಕಿಡಿ ಕಾರಿದರು.
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಡಿ. ಮಹೇಶ್ವರಪ್ಪ ಹಾಗೂ ಬಿ. ರುದ್ರಪ್ಪ ಅವರೊಂದಿಗೆ ಮಾಜಿ ಶಾಸಕ ಬಿ.ಪಿ. ಹರೀಶ್ ಹಾಗೂ ರೈತ ಮುಖಂಡ ಎಚ್. ಓಂಕಾರಪ್ಪ ಸಮಾಲೋಚನೆ  ನಡೆಸಿ ಕೂಡಲೇ ಹಿಂದಿನಂತೆ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದರು. ಮಂಗಳವಾರ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಯಲಿದ್ದು, ಪ್ರಸ್ತುತ ಸಮಸ್ಯೆ ಬಗ್ಗೆ ಮಾಹಿತಿ ನೀಡಲಾಗಿದೆ. ಸಭೆಯಲ್ಲಿ ಹಿಂದಿನಂತೆ ವಿದ್ಯುತ್ ಪೂರೈಕೆ ಮಾಡುವ ಭರವಸೆ ಇದೆ ಎಂದರು.
ಪ್ರಭುಗೌಡ, ದೊಗ್ಗಳ್ಳಿ ಸಿದ್ದಪ್ಪ, ಶಂಭುಲಿಂಗಪ್ಪ, ಮಹೇಶ್ವರಪ್ಪ ದೊಗ್ಗಳ್ಳಿ, ಬಸವರಾಜಪ್ಪ ಗರಡಿಮನೆ, ಬಿ. ಕರಿಬಸಪ್ಪ, ಕತ್ತಲಗೆರೆ ಬಸವರಾಜಪ್ಪ, ಶಾವಿಗೆ ಬಸಣ್ಣ, ರಂಗನಾಥ ರೆಡ್ಡಿ, ಡಿ.ವಿ. ರವಿ, ಡಿ. ಉಮೇಶ, ಡಿ. ಶಾಮಣ್ಣ, ಡಿ.ಕೆ. ಉಮೇಶ, ಜಿ. ಮಂಜುನಾಥ, ಜಿ. ಬಸವನಗೌಡ, ಕೆ.ಬಿ. ವೀರಣ್ಣ, ಸಂಜೀವರೆಡ್ಡಿ, ಜಿ.ಬಿ. ಕೊಟ್ರೇಶ್, ಕೆ.ಜಿ. ಶಿವನಗೌಡ, ಟಿಡಿ. ರಾಜು, ಶಿವರಾಂ ರೆಡ್ಡಿ, ಮಲ್ಲಿಕಾರ್ಜುನಪ್ಪ, ಬಸಣ್ಣ, ಜಗನ್ನಾಥ, ಹೊರಟ್ಟಿ ವೀರಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement