ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿಲ್ಲ
ಕಪ್ರ ವಾರ್ತೆ,ಶಿರಾಳಕೊಪ್ಪ, ಮಾ3
ಸರ್ಕಾರದ ಯೋಜನೆಗಳು ಎಷ್ಟೇ ಒಳ್ಳೆಯದಾಗಿದ್ದರು ಅವು ಸಾರ್ವಜನಿಕರಿಗೆ ತಲುಪುವಲ್ಲಿ ವಿಫಲವಾಗುತ್ತಿವೆ ಎಂದು ಶಿರಾಳಕೊಪ್ಪ ಸಪಪೂ ಕಾಲೇಜಿನ ಫ್ರೌಡಶಾಲಾ ಗ್ರಾಪಂ ಸದಸ್ಯ ರವಿ ಶಾನಬೋಗ ವಿಷಾದಿಸಿದರು.
ಇಲ್ಲಿಯ ಫ್ರೌಡಶಾಲೆಯಲ್ಲಿ ಆಯುಷ್ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಆಯುರ್ವೇದ ತುಂಬಾ ಒಳ್ಳೆಯ ಪರಿಹಾರವನ್ನು ಕೊಡುವಂತಹ ಔಷದಿಗಳು ದೊರೆಯುತ್ತಿವೆ.ಆದ್ದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವೈದ್ಯರ ಸಹಕಾರ ಪಡೆದುಕೊಳ್ಳಿ ಎಂದರು.
ಕಡೇನಂದಿಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯ ಹರೀಶ್ ಕುಮಾರ್ ಮಾತನಾಡಿ ಇಂದು ಶಾಲೆಗಳಲ್ಲಿ ಆರೋಗ್ಯದ ಕೊರತೆ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಹಾಗು ಗ್ರಾಮೀಣ ಜನರಿಗೆ ಆರೋಗ್ಯದ ಅರಿವು ಮೂಡಿಸಲು ಇಂತಹ ಕಾರ್ಯಕ್ರಮವನ್ನು ಸುಲಭವಾದ ಚಿಕಿತ್ಸೆಯನ್ನು ಮನೆಯಲ್ಲಿ ಮಾಡಿಕೊಳ್ಳುವ ಮುಖಾಂತರ ಇಂತಹ ಕಾರ್ಯಕ್ರಮ ಉಪಯೋಗ ವಾಗುತ್ತಿವೆ ಎಂದರು.
ಶಾಲೆಯ ಆಡಳಿತ ಸಮಿತಿಯ ನಾಗರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಎಸ್.ಎನ್. ಸೋಮಶೇಖರ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಡಾ.ಮುರಳಿಧರ,ಅನಿಲ್ ಕುಮಾರ್, ಮಹೇಶ್, ಜಾಧವ್ ಹಾಗು ಇತರರು ಇದ್ದರು.