27ರಿಂದ ಭಕ್ತಿ ಪರಿಕಲ್ಪನೆ ಮರುಚಿಂತನೆ ವಿಶ್ವಸಂವಾದ
ಕನ್ನಡಪ್ರಭ ವಾರ್ತೆ ಟಿ ಶಿವಮೊಗ್ಗ ಟಿ ಮಾ. 4
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ 27 ರಿಂದ 30 ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಆವರಣದಲ್ಲಿ ಭಕ್ತಿ ಪರಿಕಲ್ಪನೆ ಕುರಿತು ಮರುಚಿಂತನೆ ಎಂಬ ವಿಷಯದ ಕುರಿತು 4 ದಿನಗಳ ವಿಶ್ವಮಟ್ಟದ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಈ ಸಂವಾದದಲ್ಲಿ ದೇಶೀಯ ಮತ್ತು ವಿದೇಶೀಯ ವಿದ್ವಾಂಸರುಗಳು ಆಗಮಿಸಿ, ಭಕ್ತಿ ಪರಂಪರೆ ಕುರಿತ ತಮ್ಮ ಸಂಶೋಧನ ಪ್ರಬಂಧಗಳನ್ನು ಮಂಡಿಸುವರು. ಅಲ್ಲದೇ, 4 ದಿನಗಳು ಭಕ್ತಿ ಪರಂಪರೆಗೆ ಸಂಬಂಧಿಸಿದಂತೆ ಸಂಗೀತ, ನೃತ್ಯ ಮತ್ತು ಶಿಲ್ಪದ ಕುರಿತು ಸಾಂಸ್ಕೃತಿಕ ಸಂಜೆಯ ಕಾರ್ಯಕ್ರಮಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದ್ದು, ದೇಶದ ಹೆಸರಾಂತ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ವಿಶ್ವ ಸಂವಾದ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ಅನಕೂಲವಾಗುವಂತೆ ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಎಲ್ಲಾ ವಿಭಾಗಗಳ ಅಧ್ಯಾಪಕರುಗಳಿಗೆ ಅನ್ಯ ಕಾರ್ಯನಿಮಿತ್ತ ರಜೆಯನ್ನು ಮಂಜೂರು ಮಾಡಿದೆ. ಆಸಕ್ತ ಅಧ್ಯಾಪಕರುಗಳು ವಿವರಗಳಿಗಾಗಿ- 0824-2284360, ಅಂತರ್ಜಾಲ- ಡಿಡಿಠಣಣಣಢಿಢಿಢಿ.ಟಛಟ್ಜಿಛಟ್ಟ್ಠಜ್ಡಟ್ಝಿಢಜ್ಠಡ್ಝಡಿಣ.ಛ್ಛ.್ಝಟಿನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಕಾರ್ಯಕ್ರಮ ಸಂಯೋಜಕ ಬಿ. ಶಿವರಾಮಶೆಟ್ಟಿ ತಿಳಿಸಿದ್ದಾರೆ.