ಎನ್ಎಸ್ಎಸ್ ವಾರ್ಷಿಕ ಶಿಬಿರ
ಕ.ಪ್ರ. ವಾರ್ತೆ ,ಶಿರಾಳಕೊಪ್ಪ, ಮಾ.4
ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಸೇವಾಯೋಜನೆ ಸಮೀಪದ ಹುಲಿಗಿನಕೊಪ್ಪ ಗ್ರಾಮದಲ್ಲಿ ಪ್ರಾರಂಭವಾಯಿತು.
ಕಾರ್ಯಕ್ರಮವನ್ನು ಜಿಪಂ ಸದಸ್ಯ ಈಶ್ವರಪ್ಪ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾಯೋಜನೆಯಂತಹ ಕಾರ್ಯಕ್ರಮ ಸೇವಾ ಮನೋಭಾವ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. ಉಪನ್ಯಾಸಕ ಡಾ. ಹನುಮಂತಪ್ಪ, ಮಹಿಳಾ ಹಕ್ಕು ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿ, ಮಹಿಳೆ ಪುರಷರಂತೆ ಸರಿಸಮಾನವಾಗಿ ಹಕ್ಕುಗಳನ್ನು ಪಡೆದು ಸಬಲೀಕರಣ ವಾಗುತ್ತಿದ್ದಾಳೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಿ. ಚಂದ್ರಶೇಖರ ವಹಿಸಿ ಮಾತನಾಡಿ, ರಾಷ್ಟ್ರೀಯ ಸೇವಾಯೋಜನೆ ಕಾರ್ಯಕ್ರಮ ಕಲಿಕೆಯ ಒಂದು ಮಹತ್ತರ ಭಾಗ ಎಂದರು.
ಶಿಬಿರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸತೀಶ್ ಕುಮಾರ್ ಹಾಗೂ ಸಂಗಡಿಗರ ರಂಗಬೆಳಕು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಯೋಗಿಶ್ವರಪ್ಪ, ಚಂದ್ರಶೇಖರಪ್ಪ, ಸದಸ್ಯರು ಬಾಗವಹಿಸಿದ್ದರು.