ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಕೆಳಸ್ತರದ ವ್ಯಕ್ತಿಗಳನ್ನು ಗುರುತಿಸಿ'

Lingaraj Badiger
Updated On : 5 Mar 2013, 10:48 am

ಕ.ಪ್ರ. ವಾರ್ತೆ, ಸಾಗರ ಮಾ.4
ಸಮಾಜದ ಕೆಳಸ್ತರದ ವ್ಯಕ್ತಿಗಳನ್ನು ಗುರುತಿಸಿ, ಅವರ ಕೆಲಸವನ್ನು ಗೌರವಿಸುವ ಮನೋಭಾವ ಬೆಳೆಯಬೇಕು ಎಂದು ನಿವೃತ್ತ ತಹಸೀಲ್ದಾರ್ ಚಂದ್ರಶೇಖರ್ ಹೇಳಿದರು.  ಪಟ್ಟಣದ ಶ್ರೀನಗರ ಬಡಾವಣೆಯಲ್ಲಿ ನಿವೃತ್ತ ಸೈನಿಕ ಕೆ.ಆರ್. ಗಂಗಾಧರ್ ಕುಟುಂಬದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನದ ಚಾಲಕ ನಾಗರಾಜ್ ಹಾಗೂ ನಿರ್ವಾಹಕ ಮನು ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ನಿವೃತ್ತ ಸೈನಿಕ ಕೆ.ಆರ್. ಗಂಗಾಧರ್ ಕುಟುಂಬದ ಸಾಮಾಜಿಕ ಕಳಕಳಿ ಅನುಕರಣೀಯ. ಜಾನುವಾರುಗಳ ನೀರಿನ ದಾಹ ತಣಿಸಲು ಕುಡಿಯುವ ನೀರಿನ ತೊಟ್ಟಿಗಳನ್ನು ತಾಲೂಕಿನಾದ್ಯಂತ ಸ್ವಪರಿಶ್ರಮದಿಂದ ಇರಿಸುತ್ತಿರುವ ಗಂಗಾಧರ್, ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ. ಪ್ರತಿದಿನ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರನ್ನು ಗುರುತಿಸಿ, ಅವರ ಕೆಲಸವನ್ನು ಗೌರವಿಸುವ ಕೆಲಸ ಮಾಡಿದ್ದಾರೆ ಎಂದರು.  ಗಂಗಾಧರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾವು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ನಗರಸಭೆ ಕಸ ಸಂಗ್ರಹಿಸಲು ನಿಯೋಜಿಸಿರುವ ವಾಹನದಲ್ಲಿಯೆ ಹಾಕುವುದರಿಂದ ಸ್ವಲ್ಪಮಟ್ಟಿಗೆ ಪರಿಸರ ಸಂರಕ್ಷಣೆ ಮಾಡಿದಂತೆ ಆಗುತ್ತದೆ  ಎಂದರು.
 ವಿ. ಶಂಕರ್, ಡಿಶ್ ಗುರು, ಚಂದ್ರಕಾಂತ್, ಶಾಂತರಾಮ ಕಿಣಿ, ಕೃಷ್ಣಮೂರ್ತಿ, ಸದಾನಂದ್, ಸಂಧ್ಯಾರಾಣಿ, ಶಾರದ, ಗೀತಾ, ಸುಜಾತ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement