ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಕಲಿ ಚಿನ್ನ: ಆರೋಪಿಗಳ ಬಂಧನ

Rashmi Kasaragodu
Updated On : 5 Mar 2013, 12:28 pm

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.4
ನಕಲಿ ಚಿನ್ನ ನೀಡಿ ವಂಚಿಸಿದ್ದ ಇಬ್ಬರನ್ನು ಶಿಕಾರಿಪುರ ಪೊಲೀಸರು ಬಂದಿಸಿದ್ದಾರೆ.
ರವಿ ಆಲಿಯಾಸ್ ಕುಮಾರ ಅಲಿಯಾಸ್ ನಾಗಪ್ಪ (22) ನಾಗಪ್ಪ, (50) ಬಂಧಿತರು. ಇವರಿಂದ 2 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.
ಇವರು ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ರಾಘವೇಂದ್ರ ಅವರನ್ನು ಸಂಪರ್ಕಿಸಿ ತಮ್ಮ ಹಳೆ ಮನೆ ಕೆಡವುವಾಗ, ವ್ಯವಸಾಯ ಮಾಡುವಾಗ, ಹೊಸ ಮನೆ ಪಾಯ ತಗೆಯುವಾಗ ಅಪಾರ ಚಿನ್ನ ಸಿಕ್ಕಿದೆ ಎಂದು ಹೇಳಿ, ಎರಡು ಅಸಲಿ ಬಿಲ್ಲೆ ತೋರಿಸಿ ನಂಬಿಸಿದ್ದರು. ಇವರಿಂದ 5,69,000 ರು. ಪಡೆದು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು. ಈ ಸಂಬಂಧ ರಾಘವೇಂದ್ರ ಅವರು ನೀಡಿದ ದೂರಿನ ಅನ್ವಯ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಪತ್ತೆ ಮಾಡಲು ಡಿಎಸ್‌ಪಿ ಜಿ.ಬಿ. ಮಂಜುನಾಥ್ ಮಾರ್ಗದರ್ಶನದಲ್ಲಿ ಸಿಪಿಐ ಮಾದಪ್ಪ, ಪಿಎಸ್‌ಐ ಟಿ.ಎನ್. ತಿಪ್ಪೇಸ್ವಾಮಿ, ಮುಖ್ಯಪೇದೆ ತಿಮ್ಮಯ್ಯ, ಪೇದೆಗಳಾದ ಭೀಮೇಶ್, ಮಂಜುನಾಥ್, ಮಂಜುನಾಥ ಮಂಡ್ಲಿ, ಸಂತೋಷ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement