ಸಂಸದ ರಾಘವೇಂದ್ರಗೆ ಪ್ರಹ್ಲಾದನ ಪರಿಸ್ಥಿತಿ
ಕ.ಪ್ರ.ವಾರ್ತೆ,ಶಿಕಾರಿಪುರ ಮಾ.4 ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯನ್ನು ತೊರೆದಿದ್ದರೂ ಸಂಸದರಾದ ಮಗ ರಾಘವೇಂದ್ರ ಪ್ರಹ್ಲಾದನ ರೀತಿಯಲ್ಲಿ ತಂದೆಯನ್ನು ವಿರೋಧಿಸಿ ಪಕ್ಷದಲ್ಲಿದ್ದು, ಈ ಕೂಡಲೇ ತಾಲೂಕು ಬಿಜೆಪಿ ಘಟಕ ಸಂಸದರ ಫೋಟೋ ಸಹಿತದ ಕರಪತ್ರವನ್ನು ನಮೂದಿಸಿ ವಿತರಿಸುವಂತೆ ಬಿಜೆಪಿ ಮುಖಂಡ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.
ಸೋಮವಾರ ಪಟ್ಟಣದ ದಿ. ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸ್ಥಳೀಯ ಜನತೆಯ ಅವಶ್ಯಕತೆಯನ್ನು ಪೂರೈಸುವ ಚುನಾವಣೆ ಶೀಘ್ರದಲ್ಲಿದ್ದು ಪಟ್ಟಣದಲ್ಲಿ ಬಡವರ, ಕೂಲಿಕಾರರ ಮನೆ, ಬಡಾವಣೆ ಅಭಿವೃದ್ಧಿಯಾಗದೆ ಯಥಾಸ್ಥಿತಿ ಕಾಪಾಡಲಾಗಿದೆ. ಕೇವಲ ಆಯ್ದ ಸ್ಥಳಗಳು, ಅಧಿಕಾರದ ಮದ್ಯೆ ಇದ್ದವರು ವಿಪರೀತ ಅಭಿವೃದ್ಧಿ ಹೊಂದಿದ್ದಾರೆ ಎಂದರು.
ಹಿರಿಯ ಮುತ್ಸದ್ದಿ ನರಸಪ್ಪನವರ ನೆನಪಿನ ರಂಗಮಂದಿರಕ್ಕೆ ವಿದ್ಯುತ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಅಧೋಗತಿಗೆ ಸಾಕ್ಷಿಯಾಗಿದೆ ಎಂದರು.
ಅಜ್ಞಾತವಾಗಿ ಬಿಜೆಪಿಯಲ್ಲಿ: ಅಪ್ಪ(ಯಡಿಯೂರಪ್ಪ)ರ ನೂತನ ಪಕ್ಷದ ಬಗ್ಗೆ ಸಂಸದ ಮಗ (ರಾಘವೇಂದ್ರ)ನಿಗೆ ವಿಶ್ವಾಸವಿಲ್ಲವಾಗಿದೆ. ಮನೆಯಲ್ಲಿ ಮಾತ್ರ ಅಪ್ಪ, ಮಗನ ಸಂಬಂಧ ಸೀಮಿತವಾಗಿದೆ. ರಾಘವೇಂದ್ರ ಇದುವರೆಗೂ ಕೆಜೆಪಿ ಬಗ್ಗೆ ಎಲ್ಲಿಯೂ ಪ್ರಚಾರಕ್ಕೆ ತೆರಳದೆ ತಮ್ಮ ಬಿಜೆಪಿ ನಿಷ್ಟೆ ವ್ಯಕ್ತಪಡಿಸಿದ್ದು ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ರಾಘವೇಂದ್ರರ ಸ್ಥಿತಿ ಪ್ರಹ್ಲಾದನ ರೀತಿಯಾಗಿದೆ. ಇದುವರೆಗೂ ಕೆಜೆಪಿಯ ಕರಪತ್ರ, ಬ್ಯಾನರ್ ಮತ್ತಿತರ ಕಡೆಯಲ್ಲಿ ಅವರ ಭಾವಚಿತ್ರವಿಲ್ಲದಿದ್ದು ಪ್ರಾಮಾಣಿಕವಾಗಿ ಬಿಜೆಪಿಯ ಸಂಘಟನೆಯಲ್ಲಿ ಅಜ್ಞಾತವಾಗಿ ತೊಡಗಿಸಿಕೊಂಡಿರುವ ಬಗ್ಗೆ ಪ್ರಶಂಸಿಸಿದರು.
ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಅನಾದಿ ಕಾಲದಿಂದ ಶಿಕಾರಿಪುರದ ಜನತೆ ಸ್ಪೂರ್ತಿಯಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಎರಡನೇ ಸ್ವಾತಂತ್ರಕ್ಕಾಗಿ ಹೋರಾಡಿದ ರೀತಿಯಲ್ಲಿ ಇದೀಗ ಪಕ್ಷದ ಪುನರ್ ಸಂಘಟನೆಗೆ ತಾಲೂಕಿನ ಜನತೆ ಸ್ಪೂರ್ತಿಯಾಗಿದ್ದಾರೆ ಎಂದರು.
ನಿಷ್ಟುರವಾಗಿದ್ದು ನಿಜ: ಯಡಿಯೂರಪ್ಪ ಜೈಲಿಗೆ ತೆರಳಲು ಈಶ್ವರಪ್ಪ ಕಾರಣರಲ್ಲ ಎಂದು ಕ್ಷೇತ್ರದ ಅಧಿದೇವತೆ ಶ್ರೀ ಹುಚ್ಚೂರಾಯ ಹಾಗೂ ಬೀರಲಿಂಗೇಶ್ವರನ ಹೆಸರಿನಲ್ಲಿ ಆಣೆ ಮಾಡಿದ ಅವರು ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸತ್ಯ ತಿಳಿಸುವ ಮೂಲಕ ನಿಷ್ಟುರವಾಗಿದ್ದು ನಿಜ ಎಂದರು. ಬಡವರು, ಪ್ರಾಮಾಣಿಕರು, ಯುವಕರು, ಪಧವೀದರರು ಪಟ್ಟಣದಲ್ಲಿ ಪಕ್ಷದ ಮೂಲಕ ಸ್ವರ್ದಿಸಿದ್ದು ಹಣ, ಹೆಂಡ, ಜಾತಿಯನ್ನು ತಿರಸ್ಕರಿಸಿ ಬೆಂಬಲಿಸಲು ಮನವಿ ಮಾಡಿದರು. ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಕೊಪ್ಪಲು ವಹಿಸಿದ್ದರು,ದರು. ಸೂಡಾ ಅಧ್ಯಕ್ಷ ದತ್ತಾತ್ರಿ, ಭಾನುಪ್ರಕಾಶ್, ಸಿದ್ರಾಮಣ್ಣ, ಪದ್ದಣ್ಣ, ನೀಲಪ್ಪ, ಜಯಣ್ಣ, ಅಭ್ಯರ್ಥಿ ಸಂಗಮೇಶ್ ಉಪಸ್ಥಿತರಿದ್ದರು.