ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರಭೋದಿನಿ ಗುರುಕುಲಕ್ಕೆ ಅರ್ಜಿ ಆಹ್ವಾನ

Lingaraj Badiger
Updated On : 6 Mar 2013, 10:49 am

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ, ಮಾ.5
ಪ್ರಭೋದಿನಿ ಗುರುಕುಲದಲ್ಲಿ ಉತ್ತಮ ಉಚಿತ ಗುರುಕುಲ  ಶಿಕ್ಷಣಕ್ಕೆ 2013-2014ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.ಗುರುಕುಲ ಕಳೆದ 18 ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ವೇದ, ಯೋಗ, ವಿಜ್ಞಾನ, ಕೃಷಿ ಮತ್ತು ಕಾಲಾ ಕೌಶಲ ಎಂಬ ಪಂಚಮುಖಿ ಶಿಕ್ಷಣದ ಮುಖಾಂತರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತೇಜನ ಕೊಡಲಾಗುತ್ತಿದೆ.
ಪ್ರಸಕ್ತ ವರ್ಷದಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಪ್ರಭೋದಿನಿ ಟ್ರಸ್ಟ್ ಹೆಸರಲ್ಲಿ 150 ಡಿಡಿ ಕಳಿಸಿ ಅರ್ಜಿ ಪಡೆಯಬಹುದು.
ಅರ್ಜಿಗಳನ್ನು ಮಾ. 30, 2013ರ ಒಳಗೆ ಪ್ರಭೋದಿನಿ ಗುರುಕುಲ ಚಿತ್ರಕೂಟ, ಹರಿಹರಪುರ ಕೊಪ್ಪ ತಾಲೂಕು, ಚಿಕ್ಕಮಗಳೂರ ಜಿಲ್ಲೆ -577120.
ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ ಎಂದು ಗುರುಕುಲದ ವ್ಯವಸ್ಥಾಪಕ ಉಮೇಶ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2012-2013ನೇ ಸಾಲಿನಲ್ಲಿ 8, 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಏಪ್ರಿಲ್ 20 ರಿಂದ ವೇದ ಶಿಕ್ಷಣ ಶಿಬಿರ ನಡೆಯಲಿದೆ. ವೇದ ಶಿಕ್ಷಣ ವರ್ಗಕ್ಕೆ ದಿ.25-3-2013ರ ಒಳಗೆ ಅರ್ಜಿಸಲ್ಲಿಸಬೇಕು. ಅರ್ಜಿಯನ್ನು ಪ್ರಭೋದಿನಿ ಟ್ರಸ್ಟ್ ಹೆಸರಿನಲ್ಲಿ 100  ಡಿಡಿ ಮೂಲಕ ಕಳಿಸಿ ಅರ್ಜಿಯನ್ನು ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement