ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೂರ ಉಳಿದ ಬೇಳೂರು

Lingaraj Badiger
Updated On : 7 Mar 2013, 10:39 am

- ರವಿ ಬಿದನೂರು
ಕ.ಪ್ರ.ವಾರ್ತೆ, ಹೊಸನಗರ, ಮಾ.6
ಸ್ಥಳೀಯ ಸಂಸ್ಥೆ ಚುನಾವಣೆ ಜ್ವರ ಅಂತಿಮ ಹಂತ ತಲುಪಿದ್ದರೂ ಚುನಾವಣೆ ಘೋಷಣೆಯಾದ ಅಂದಿನಿಂದ ಈ ತನಕ ಶಾಸಕ ಬೇಳೂರು ಮಾತ್ರ ಕ್ಷೇತ್ರದತ್ತ ಮುಖಮಾಡಿಲ್ಲ. ಇತ್ತ ಬಿಜೆಪಿ ಕೂಡ ಚುನಾವಣೆ ಪ್ರಚಾರದಲ್ಲಿ ಬೇಳೂರು ನೆನಪನ್ನು ಕೂಡ ಮಾಡದೆ ನೇರವಾಗಿ ಧುಮುಕಿದೆ.
  ಈ ಹಿಂದೆ ನಡೆದ ಜಿಪಂ, ತಾಪಂ ಚುನಾವಣೆ ಸಂದರ್ಭದಲ್ಲಿಯೂ ಬೇಳೂರು ಶಾಸಕ ಸ್ಥಾನದಿಂದ ಅನರ್ಹತೆಗೊಂಡು ಬಿಜೆಪಿಯಿಂದ ದೂರ ಸರಿದಿದ್ದರು.
  ಮಾತ್ರವಲ್ಲ ಕಾಂಗ್ರೆಸ್‌ಗೆ ಪರೋಕ್ಷ ಬೆಂಬಲ ನೀಡಿದ್ದರು. ಆದರೆ ಅನರ್ಹತೆ ರದ್ದುಗೊಂಡ ಮೇಲೆ ಬಿಜೆಪಿಯಲ್ಲೇ ಮತ್ತೆ ಕಾಣಿಸಿಕೊಂಡಿದ್ದರು. ಈಗ ಮತ್ತೆ ಪರಿಸ್ಥಿತಿ ಭಿನ್ನವಾಗಿದೆ.  
ಕಾಂಗ್ರೆಸನತ್ತ: ಕಾಂಗ್ರೆಸನತ್ತ ಮುಖಮಾಡಿರುವ ಬೇಳೂರು ಇನ್ನೇನು ರಾಜಿನಾಮೆ ನೀಡುತ್ತಾರೆ ಎಂಬ ವದಂತಿ ಹಬ್ಬಿತ್ತು. ಸ್ವತ ಅವರೇ ಮಾಧ್ಯಮದೆದರು ಹೇಳಿಕೊಂಡಿದ್ದರು.
   ಈ ತನಕ ಅದ್ಯಾವುದು ನಡೆದಿಲ್ಲ. ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಸುದ್ದಿ ಹರಡುತ್ತಲೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಬೇಳೂರನ್ನು ಸೋಲಿಸುವುದೆ ನನ್ನ ಗುರಿ ಎಂದು ಕಾಗೋಡು ಘೋಷಿಸಿದ್ದಾರೆ.
   ಕಳೆದ 15 ದಿನಗಳ ಹಿಂದೆ ಕ್ಷೇತ್ರಕ್ಕೆ ಬಂದುಹೋಗಿದ್ದ ಶಾಸಕರು ಚುನಾವಣೆಗೆ ಬರುವುದಿರಲಿ. ಆ ಬಗ್ಗೆ ಯಾವುದೇ ಹೇಳಿಕೆಯನ್ನು ಈವರೆಗೆ ನೀಡಿಲ್ಲ. ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಅವರು ಗೆಲವಿನಲ್ಲಿ ನನ್ನ ಪಾತ್ರವಿದೆ ಎಂದು ಆಗಾಗ ಹೇಳಿಕೊಂಡಿದ್ದರು.
ಬೆಂಬಲಿಗರ ಗೊಂದಲ: ಬೇಳೂರು ಬೆಂಬಲಿಗರು ಮಾತ್ರ ಗೊಂದಲಕ್ಕೀಡಾಗಿರುವುದು ಮಾತ್ರ ಸತ್ಯ.
  ಶಾಸಕರಿಂದ ಯಾವುದೆ ಹೇಳಿಕೆ ಬಾರದ ಕಾರಣ ಚುನಾವಣೆಯಲ್ಲಿ ತಟಸ್ಥರಾಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಬಿಜೆಪಿಯ ಪ್ರಚಾರ ಕರಪತ್ರದಲ್ಲಿ ಶಾಸಕರ ಪೋಟೋ ಹಾಕಿಲ್ಲ. ಹಾಗಾಗಿ ನಾವ್ಯಾರು ಬೆಂಬಲಿಸುತ್ತಿಲ್ಲ, ಕಾರಣ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಲಿದೆ ಎಂದು ಬೆಂಬಲಿಗರು ನುಡಿಯುತ್ತಾರೆ.
ಬೇಳೂರು ಏನಂತಾರೆ: ರಾಜಕೀಯ ಅಸ್ಥಿರತೆ ಮತ್ತು ಬಿಜೆಪಿಯಿಂದ ಯಾವುದೆ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಚುನಾವಣೆಯಿಂದ ತಟಸ್ಥನಾಗಿದ್ದೇನೆ.
   ಎರಡು ಬಾರಿ ಶಾಸಕರಾದರೂ ಪಕ್ಷ ಏನನ್ನು ಕೊಡಲಿಲ್ಲ. ರಾಜ್ಯದಲ್ಲಿ ಈಡಿಗ ಸಮಾಜದ ಸಂಘಟನೆ ದೊಡ್ಡ ಮಟ್ಟದಲ್ಲಿದ್ದರೂ ಯಾವುದೆ ಗೌರವ ಕೊಡದೆ ಅನ್ಯಾಯ ಮಾಡಿದೆ. ಹೀಗಾಗಿ ಚುನಾವಣೆಯಲ್ಲಿ ತಟಸ್ಥನಾಗಿದ್ದು ಮುಂದಿನ ಹಾದಿಯ ಬಗ್ಗೆ ಚಿಂತಿಸುತ್ತಿದ್ದೇನೆ.
   ಜಿಪಂ, ತಾಪಂ ಚುನಾವಣೆ ಸಂದರ್ಭದಲ್ಲಿ ಅನರ್ಹತೆಗೊಂಡಿದ್ದರಿಂದ ಸ್ವತಂತ್ರನಾಗಿದ್ದ ಕಾರಣ ಕಾಂಗ್ರೆಸ್ ಬೆಂಬಲಿಸಿದ್ದೆ. ಆದರೀಗ ಇನ್ನು ಬಿಜೆಪಿಯ ಶಾಸಕನಾಗಿದ್ದು, ಪಕ್ಷದ ಮೇಲೆ ಅಸಮದಾನ ಇರುವುದರಿಂದ ತಟಸ್ಥನಾಗಿದ್ದೇನೆ. ಶಾಸಕ ಸ್ಥಾನದ ರಾಜಿನಾಮೆ ಬಗ್ಗೆ ಸದ್ಯದಲ್ಲೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ “OÚ«Ú­sÚ®ÚúڒOæQ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement