'ವಿದ್ಯುತ್ ಕಡಿತ ವಿರೋಧಿಸಿ ಕೆಪಿಟಿಸಿಎಲ್‌ಗೆ ಮನವಿ'
ಜೋಗ್‌ಫಾಲ್ಸ್: ರಾಜ್ಯಕ್ಕೆ ಬೆಳಕು ನೀಡುವ ಜನರು ವಿದ್ಯುತ್ ಕಡಿತದ ಸಮಸ್ಯೆ ಅನುಭವಿಸುವಂತಾಗದ್ದು, ಬೇಸತ್ತ ಜನರು ಕೆಪಿಟಿಸಿಎಲ್ ನೋಡಲ್ ಅಧಿಕಾರಿ ಹರೀಶ್‌ರಿಗೆ ಮನವಿ ಸಲ್ಲಿಸಿದರು.
ಅಣೆಕಟ್ಟಿಗಾಗಿ ಮತ್ತು ಎಂಆರ್‌ಎಸ್ ನಿರ್ಮಾಣಕ್ಕೆ ಜಾಗ ನೀಡಿದ್ದಕ್ಕಾಗಿ ದಿನಪೂರ್ತಿ ವಿದ್ಯುತ್ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಹರೀಶ್ ಮಾತನಾಡಿ, ಮೇಲಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕರವೇ ಗುರು, ಗುಡ್ಡೇಮನೆ ರಾಮು, ಕೇಬಲ್ ಜಗ್ಗ, ಲೋಕೇಶ್, ಅಣ್ಣಪ್ಪ, ಮಂಜಪ್ಪ ಮೊದಲಾದವರು ಇದ್ದರು.