ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದಾರ್ಶನಿಕರಿಗೆ ಕಾಳಿದಾಸರೇ ಸ್ಫೂರ್ತಿ

Parashurama
Updated On : 8 Mar 2013, 10:39 am

ಸಾಗರ: ದಾರ್ಶನಿಕರು, ಮೀಮಾಂಸಕರು ಹಾಗೂ ಕವಿಗಳಿಗೆ ಕಾಳಿದಾಸರೇ ಸೂರ್ತಿಯಾಗಿದ್ದು ಭಾಷೆ, ವಿಷಯ, ವಿವೇಕ ಹಾಗೂ ಸೂಕ್ಷ್ಮತೆಯನ್ನು ತನ್ನ ಕೃತಿಗಳ ಮೂಲಕ ಬಿತ್ತುವಲ್ಲಿ ಕಾಳಿದಾಸರ ಪ್ರಯತ್ನ ಅನುಕರಣೀಯ ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.
  ಪ್ರಜ್ಞಾಭಾರತಿ ವಿದ್ಯಾಮಂದಿರ ಕರ್ನಾಟಕ ಸಂಸ್ಕೃತ ವಿವಿ, ಸಾಗರದ ಗಜಾನನ ಸಂಸ್ಕೃತ ಪಾಠಶಾಲೆ ಹಾಗೂ ಸಂಸ್ಕೃತ ಸಾಗರ ಪಾಠಶಾಲೆಗಳ ಸಹಯೋಗದೊಂದಿಗೆ ಏಳುದಿನಗಳ ಕಾಲ ಹಮ್ಮಿಕೊಂಡಿದ್ದ ಅಧ್ಯಾತ್ಮ ಸಂಚಲನ ಕಾಳಿದಾಸ ಕುತೂಹಲ ಉಪನ್ಯಾಸ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಆರನೇ ಇಂದ್ರಿಯ: ಅಪರೂಪದ ನೈಸರ್ಗಿಕ ರಹಸ್ಯಗಳ ಅರಿವನ್ನು ಪಡೆದಿದ್ದ ಮಹಾಕವಿ ಕಾಳಿದಾಸ ಅವನ್ನು ಸಮಾಜದ ಉನ್ನತಿಗಾಗಿ ತೊಡಗಿಸಿ ಅನುಕರಣೀಯರಾಗಿದ್ದಾರೆ.
    ಅಧ್ಯಾತ್ಮದಲ್ಲಿ ಪಂಚೀಕರಣ ಶಕ್ತಿಯ ಹೊರತಾದ ಆರನೇ ಇಂದ್ರಿಯದ ಪ್ರಭಾವ ಪಡೆದಿದ್ದ ಕಾಳಿದಾಸ ರಘುವಂಶದಲ್ಲಿ ಅಗ್ನಿವರ್ಣ ಎಂಬ ದುಷ್ಟ ರಾಜನೂ ಇದ್ದ ಎಂಬ ಮಾತನ್ನು ಉಲ್ಲೇಖಿಸುತ್ತ ರಾಜಧರ್ಮ ಹಾಗೂ ಪ್ರಜಾ ಧರ್ಮ ಸಮ್ಮಿಳತಗೊಳ್ಳಬೇಕು ಎಂದು ಪ್ರತಿಪಾದಿಸುವುದು ಇಂದಿನ ಪ್ರಜಾಪ್ರಭುತ್ವ ಸನ್ನಿವೇಶದಲ್ಲೂ ಪ್ರಸ್ತುತವೆನ್ನಿಸುತ್ತದೆ ಎಂದರು.
 ಆಧ್ಯಾತ್ಮ ಎಂದರೆ ತನ್ನನ್ನು ತಾನೆ ತಿಳಿಯುವುದಾಗಿದೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.   ಕಾಳಿದಾಸ ತನ್ನ ಕೃತಿಗಳಲ್ಲಿ ತನ್ನೊಳಗಿನ ಆಧ್ಯಾತ್ಮದ ಜ್ಯೋತಿಯನ್ನು ಪ್ರಜ್ವಲಿಸಿಕೊಳ್ಳಬೇಕು. ನಾವು ಶುದ್ಧಾತ್ಮರಾಗುವ ಜೊತೆಗೆ ಪ್ರಜಾಧರ್ಮವನ್ನು ಕಾಪಾಡುವಂತೆ ಆಗಬೇಕು ಎಂದು ಸೂಚ್ಯವಾಗಿ ತಿಳಿಸುತ್ತಾನೆ ಎಂದರು.
        ಬೆಂಗಳೂರಿನ ಜೋಶಿ ಫೌಂಡೇಷನ್ ಮುಖ್ಯಸ್ಥ ದಿನೇಶ್ ಕುಮಾರ್ ಜೋಶಿ ಮಾತನಾಡಿ, ಪೋಷಕರ ಜೀವನ ಕ್ರಮ, ಸಮಾಜದೊಂದಿಗಿನ ವ್ಯವಹಾರ ಅವರ ಮಕ್ಕಳ ನಡವಳಿಕೆಯಲ್ಲಿ ಪ್ರತಿಫಲಿಸುತ್ತದೆ ಎಂದರು.
 ದಾನಿ ಎ.ಎನ್. ವೆಂಕಟಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ, ಸದಾನಂದ ಶರ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments