ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕ.ಪ್ರ.ವಾರ್ತೆ,ತರೀಕೆರೆ, ಮಾರ್ಚಿ.7
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸಮೀಪದ ಮಿರಳೇನಹಳ್ಳಿಯಲ್ಲಿ ರು. 1 ಕೋಟಿ 30 ಲಕ್ಷದಲ್ಲಿ ಸುಮಾರು 3.20 ಕೀ.ಮಿ.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಾಸಕ ಡಿ.ಎಸ್. ಸುರೇಶ್ ಅವರು ಗುದ್ದಲಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಡಿ.ಎಸ್. ಸುರೇಶ್, ತರೀಕೆರೆ ಪಟ್ಟಣಕ್ಕೆ ಸಮೀಪವೇ ಇರುವ ಮಿರಳೇನಹಳ್ಳಿ ರಸ್ತೆಗಳು ಬಹಳ ಹಿಂದಿನಿಂದಲೂ ಅಭಿವೃದ್ಧಿ ಆಗಿರಲಿಲ್ಲ. ಅನೇಕ ರಸ್ತೆಗಳು ಕಿರಿದಾಗಿದೆ. ರೈತರು ಬೆಳೆದಂತಹ ಬೆಳೆಗಳನ್ನು ಸಾಗಿಸಲು ಉತ್ತಮವಾದ ಮತ್ತು ವಿಶಾಲವಾದ ರಸ್ತೆಗಳು ಅಗತ್ವವಾಗಿದೆ. ಇದೀಗ ರು. 1 ಕೋಟಿ 30 ಲಕ್ಷದಷ್ಟು ದೊಡ್ಡ ಪ್ರಮಾಣದ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ಅವರು ಶಾಶ್ವತವಾಗಿ ಉಳಿಯುವ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ನಿರ್ವಹಿಸಬೇಕು
ಎಂದು ತಿಳಿಸಿದರು.
ಮೂಲ ಸೌಕರ್ಯ: ರು. 12 ಕೋಟಿಯಲ್ಲಿ ಚಿಕ್ಕಪುಟ್ಟ ಗ್ರಾಮದಿಂದ ಹಿಡಿದು ತಾಲೂಕಿನಾದ್ಯಂತ ಎಲ್ಲ ಕಡೆ ರಸ್ತೆ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಇತ್ಯಾದಿ ಮೂಲ ಸೌಕರ್ಯಗಳನ್ನು ನಿರ್ವಹಿಸಲಾಗಿದ್ದು, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ರು. 12 ಕೋಟಿಯಲ್ಲಿ ಸುಮಾರು 30 ಕೀ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸದಸ್ಯ. ಕೆ.ಆರ್. ಆನಂದಪ್ಪ ಮಾತನಾಡಿ, ತಾಲೂಕಿನ ಸುಮಾರು 280 ಹಳ್ಳಿಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಶಾಸಕರು ಬಹಳ ದೊಡ್ಡ ಮಟ್ಟದ ಅನುದಾನವನ್ನು ತಂದು ಅಭಿವೃದ್ಧಿ ಪರವಾಗಿ ಹಲವು ಕಾರ್ಯಗಳನ್ನು ನಿರ್ವಹಿಸಿದ್ದಾರೆ ಎಂದರು.
ತಾಪಂ ಅಧ್ಯಕ್ಷೆ ದೀಪಾ ಉಮೇಶ್, ಗ್ರಾಪಂ ಅಧ್ಯಕ್ಷೆ ಉಷಾ ರಂಗನಾಥ್, ಗ್ರಾಪಂ ಸದಸ್ಯ ತಿಪ್ಪೇಶ್ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಸದಸ್ಯ ರಮೇಶ್, ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.