ಶಾಂತಯುತ ಮತದಾನ
ಕ.ಪ್ರ. ವಾರ್ತೆ, ಶಿರಾಳಕೊಪ್ಪ, ಮಾ.7
ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟ ಹಾಗೂ ವಿಶೇಷ ಕುತೂಹಲ ಕೆರಳಿಸಿರುವ ಶಿರಾಳಕೊಪ್ಪ ಪಪಂ ಚುನಾವಣೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತ ರೀತಿಯಿಂದ ನಡೆಯಿತು.
ಶೇ.72.1ರಷ್ಟು ಮತದಾನವಾಗಿರುವ ಇಲ್ಲಿನ ಪಪಂ ಚುನಾವಣೆಯಲ್ಲಿ ಒಟ್ಟು 15 ಸ್ಥಾನವನ್ನು ಹೊಂದಿದ್ದು, 14ಚುನಾವಣಾ ಕೇಂದ್ರವನ್ನು ಮಾಡಿ ಚುನಾವಣೆ ಸುಲಲಿತವಾಗಿ ನಡೆಯುವಂತೆ ಚುನಾವಣೆ ಅದಿಕಾರಗಳುನೋಡಿಕೊಂಡರು. ಈ ಮೊದಲು ಇಲ್ಲಿಯ ಪಪಂಗೆ ನಾಮಪತ್ರ ಸಲ್ಲಿಸುವಾಗ 5ನೇ ವಾರ್ಡ್ನ ಪಕ್ಷೇತರ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಆಗಿ ಉಳಿದ 14 ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಚುನಾವಣಾ ಕಣದಲ್ಲಿ ವಿವಿಧ ರಾಜಕೀಯ ಪಕ್ಷಗಳಾದ ಕೆಜೆಪಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಆರ್, ಕಾಂಗ್ರೆಸ್ ಸೇರಿದಂತೆ ಪಕ್ಷೇತರರು ಕಣದಲ್ಲಿ ಇದೆ. ಕೆಲವು ವಾರ್ಡ್ಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಿ ಜಯಕ್ಕೆ ಅಡ್ಡಗಾಲು ಹಾಕಿವೆ.
ಸುಲಭವಾಗಿ ಗೆಲ್ಲುತ್ತೇವೆ ಎನ್ನುವ ಕೆಲ ಅಭ್ಯರ್ಥಿಗಳಿಗೆ ಇಂದು ನಡೆದ ಚುನಾವಣೆಯ ಪೈಪೋಟಿ ನೀರಿಳಿಸಿದೆ. ಅಭ್ಯರ್ಥಿಗಳ ಆತಂಕವನ್ನು ಹೆಚ್ಚಿಸಿವೆ. ತಾಲೂಕಿನ ಪ್ರಮುಖ ಪಕ್ಷವಾದ ಕೆಜೆಪಿಯನ್ನು ಮಟ್ಟಹಾಕಬೇಕೆಂದು ಹಲವು ರಾಜಕೀಯ ಪಕ್ಷಗಳು ತಮ್ಮ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿ ಮತದಾರರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿವೆ.
ಸಣ್ಣಪುಟ್ಟ ಘಟನೆ ಬಿಟ್ಟರೆ ಮತದಾನ ಶಾಂತವಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.