ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಗರಸಭೆಗೆ ಕಾದಿವೆ ಸಮಸ್ಯೆ ಸಾಲು

Parashurama
Updated On : 9 Mar 2013, 11:33 am

ಕ.ಪ್ರ.ವಾರ್ತೆ,ಶಿವಮೊಗ್ಗ, ಮಾ.8
ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಶಿವಮೊಗ್ಗ ನಗರಸಭೆ ಗಮನಿಸಬೇಕಾದ ಸಮಸ್ಯೆಗಳು ಬಹಳಷ್ಟಿವೆ. ಅದಕ್ಕೊಂದು ಉದಾಹರಣೆ ನಗರದ ವಿವಿಧೆಡೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು ಉದ್ಘಾಟನೆಯಾಗದೇ ಪಾಳು ಬಿದ್ದಿರುವುದು.
 ನಗರದ ಕೊಳಚೆ ಪ್ರದೇಶಗಳನ್ನು ಗುರುತಿಸಿ ಅಲ್ಲಿಯ ಜನರಿಗೆ ಮೂಲ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕೊಳಚೆ ನಿರ್ಮೂಲನ ಮಂಡಳಿ ಆಯ್ದ ಕೊಳಚೆ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನಿರ್ವಹಣೆಯನ್ನು ನಗರಸಭೆಗೆ ವಹಿಸುತ್ತದೆ.
    ಕೊಳಚೆ ನಿರ್ಮೂಲ ಮಂಡಳಿಯೇನೋ ಶೌಚಾಲಗಳನ್ನು ನಿರ್ಮಾಣ ಮಾಡಿ ಕೈ ತೊಳೆದುಕೊಳ್ಳುತ್ತದೆ. ಇವುಗಳ ನಿರ್ವಹಣೆ ಮಾಡುವ ಹೊಣೆ ಹೊತ್ತಿರುವ ನಗರಸಭೆ ಮೌನ ತಾಳಿದೆ.
ಮುಚ್ಚಲಾಗಿದೆ: ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಅಕ್ಟೋಬರ್ 2008 ರಲ್ಲಿ 4 ಲಕ್ಷ ರುಪಾಯಿ ವೆಚ್ಚದಲ್ಲಿ ನಗರದ ಚೌಡೇಶ್ವರಿ ಕಾಲೋನಿ ಹಾಗೂ ಮಲ್ಲಿಕಾರ್ಜುನ ನಗರ, ಜೆಪಿ ನಗರ, ಟ್ಯಾಂಕ್ ಮೊಹಲ್ಲಾದಲ್ಲಿ ನಿರ್ಮಲ್ ಭಾರತ್ ಅಭಿಯಾನ್ ಯೋಜನೆಯಡಿ 10 ಸೀಟರ್‌ಗಳ ಶೌಚಾಲಯ ನಿರ್ಮಿಸಲಾಗಿದೆ. ಇವುಗಳಲ್ಲಿ ಚೌಡೇಶ್ವರಿ ಕಾಲೋನಿ ಹಾಗೂ ಮಲ್ಲಿಕಾರ್ಜುನ ನಗರದಲ್ಲಿ ನಿರ್ಮಾಣಗೊಂಡಿರುವ ಶೌಚಾಲಯಗಳು ಈವರೆಗೂ ಸಾರ್ವಜನಿಕರ ಉಪಯೋಗಕ್ಕೆ ನೀಡದೆ ಬೀಗ ಮುದ್ರೆ ಹಾಕಲಾಗಿದೆ.
ನಿರ್ಲಕ್ಷ್ಯ: ಇನ್ನು ಮಲ್ಲಿಕಾರ್ಜುನ ನಗರದಲ್ಲೂ 4 ಲಕ್ಷ ರುಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಾಣಗೊಂಡಿದ್ದು, ಶೌಚಾಲಯದ  ಗುಂಡಿಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ.
   ಬಾಗಿಲು, ಕಿಟಕಿಗಳು ಕಿತ್ತುಹೋಗಿವೆ. ಲಕ್ಷಾಂತರ ರುಪಾಯಿ ಮೌಲ್ಯದ ಯೋಜನೆಯೊಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿ ಶೌಚಾಲಯಗಳು ಪಾಳು ಬಿದ್ದವೆ.
ಮಹಿಳೆಯರಿಗೆ ಕಿರಿಕಿರಿ: ಚೌಡೇಶ್ವರಿ ಕಾಲೋನಿಯಲ್ಲಿ ಸುಮಾರು 600ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಇಲ್ಲಿನ ಸುತ್ತಮುತ್ತಲ ನಿವಾಸಿಗಳು ಬಹಿರ್ದೆಸೆಗೆ ಅಕ್ಕ ಪಕ್ಕದ ತೋಟಗಳನ್ನು ಅವಲಂಭಿಸಿದ್ದಾರೆ.    ಮಹಿಳೆಯರು ತಮ್ಮ ನಿತ್ಯ ಕರ್ಮ ಮುಗಿಸಲು ತೋಟಗಳಿಗೆ ಹೋಗುವ ಸಂದರ್ಭದಲ್ಲಿ ಕೆಲ ಪುಡಾರಿಗಳಿಂದ ಲೈಗಿಂಕ ಕಿರುಕುಳಕ್ಕೆ ಒಳಗಾದ ಘಟನೆಗಳು ನಡೆದಿದೆ.
    ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನಕ್ಕೆ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕುಡಿಯುವ ನೀರಿಗೂ ಸಮಸ್ಯೆ: ಚೌಡೇಶ್ವರಿ ಕಾಲೋನಿಯಲ್ಲಿ ನಗರಸಭೆಯಿಂದ ನಿರ್ಮಿಸಲ್ಪಟ್ಟ ಬೋರ್‌ವೆಲ್ ನಿಷ್ಕ್ರೀಯಗೊಂಡಿದ್ದು, ಕುಡಿಯುವ ನೀರಿನ ಟ್ಯಾಂಕ್ ಉಪಯೋಗವಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಕಿ.ಲೋ ದೂರ ಹೋಗಬೇಕಾಗಿದೆ.
ಇವರೇನಂತಾರೆ?
 5-6 ವರ್ಷ ಆದರೂ ಶೌಚಾಲಯ ಉದ್ಘಾಟನೆಯಾಗಿಲ್ಲ. ಇಲ್ಲಿನವರಿಗೆ ಬಹಿರ್ದೆಸೆಗೆ ಹೋಗಲು ಹಿಂದಿನ ತೋಟಗಳನ್ನು ಅವರಂಭಿಸಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ ಆದರೂ ಪ್ರಯೋಜನವಾಗಿಲ್ಲ.
  ಇಲ್ಲಿನ ಹೆಣ್ಣು ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೂಡಲೇ ಶೌಚಾಲಯದ ಬೀಗ ಮುದ್ರೆ ತೆರೆವುಗೊಳಿಸಿ, ಬಡ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿ ಶೇಖ್ ಹಿರಾಷಾದ್  ಚೌಡೇಶ್ವರಿ ನಗರದ ಶೌಚಾಲಯ ಉದ್ಘಾಟನೆಗೊಂಡಿದೆ. ಆದರೆ, ಸ್ಥಳೀಯ ಸ್ವಸಹಾಯ ಸಂಘಗಳು ಇದರ ನಿರ್ವಹಣೆ ಹೊಣೆ ಹೊರಲು ಸಿದ್ಧರಿರಲಿಲ್ಲ. ಸಾರ್ವಜನಿಕರೊಂದಿಗೆ ಹಲವಾರು ಬಾರಿ ಸಭೆ ಕರೆದು ತಿಳಿ ಹೇಳಲಾಗಿದೆ.     ಆದರೆ, ಈ ಬಗ್ಗೆ ಯಾರು ಮಂದಾಗಲಿಲ್ಲ. ಆದ್ದರಿಂದ ಶೌಚಾಲಯಕ್ಕೆ ಬೀಗ ಮುದ್ರೆ ಹಾಕಲಾಗಿದೆ.    ಸಾರ್ವಜನಿಕರು ಶೌಚಾಲಯವನ್ನು ಸರಿಯಾಗಿ, ಸ್ವಚ್ಛವಾಗಿ ಉಪಯೋಗಿಸಿಕೊಳ್ಳುವುದಾದರೆ ಸಮಸ್ಯೆಯಿಲ್ಲ. ಮುಂದಿನ ದಿನಗಳಲ್ಲಿ ಶೌಚಾಲಯದ ಕಟ್ಟಡವನ್ನು ತೆರವುಗೊಳಿಸಿ ಸಾರ್ವಜನಿಕ ಕಾರ್ಯಕ್ರಮಗಳು ಅಥವಾ ಗೋದಾಮು ಮಾಡಲಾಗುತ್ತದೆ ಎನ್ನುತ್ತಾರೆ ಇಲ್ಲಿನ ನಗರಸಭೆ ಅಧಿಕಾರಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments