ನೂತನ ವಿಪ್ರ ಸಮಾಜ ಪ್ರಾರಂಭ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮಾ.8
ಶಿರಾಳಕೊಪ್ಪ ವಲಯವೆಂಬ ಹೆಸರಿನಲ್ಲಿ ತ್ರಿಮತಸ್ಥ ಬ್ರಾಹಣರು ಒಗ್ಗೂಡಿ ಶಿರಾಳಕೊಪ್ಪ ಪಟ್ಟಣವನ್ನು ಕೇಂದ್ರವಾಗಿಟ್ಟುಕೊಂಡು ನೂತನ ವಿಪ್ರ ಸಮಾಜ ಪ್ರಾರಂಭಿಸಲಾಯಿತು.
ಪಟ್ಟಣದ ರಾಮೇಶ್ವರ ದೇವಸ್ಥಾನದಲ್ಲಿ ಸುತ್ತಮುತ್ತಲ ಎಲ್ಲ ವಿಪ್ರ ಭಾಂಧವರು ಒಗ್ಗೂಡಿ ಪ್ರಾರಂಭಿಸಲಾದ ಸಮಾಜಕ್ಕೆ ಹತ್ತಿರದ ಬಳ್ಳಿಗಾವಿ ಗ್ರಾಮದ ಹಿರಿಯರಾದ ವೆಂಕಣ್ಣ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೆಂಕಣ್ಣ, ಬಹುದಿನಗಳಿಂದ ಪ್ರಾರಂಭಿಸಬೇಕೆಂಬ ಎಲ್ಲರ ಅಪೇಕ್ಷೆ ಮತ್ತು ನೀರಿಕ್ಷೆಯಂತೆ ಸಮಾಜವನ್ನು ಪ್ರಾರಂಭಿಸಲಾಗಿದೆ. ಆದರೆ ಇಲ್ಲಿ ಎಲ್ಲರೂ ಒಂದು ಎಂಬ ಭಾವನೆಯಿಂದ ಸಮಾಜವನ್ನು ಮುನ್ನಡೆಸಬೇಕಿದೆ. ಸಮಾಜವನ್ನು ಕಟ್ಟುವುದು ಸುಲಭದ ಮಾತಲ್ಲ.
ಪ್ರತಿಯೊಬ್ಬರು ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ಹಾಜರಿದ್ದು ಸಹಕರಿಸಿದಾಗ ಸಮಾಜ ಮುನ್ನೆಡಸಲು ಸಾಧ್ಯ ಎಂದರು.
ನೂತನ ಸಮಾಜದ ಅಧ್ಯಕ್ಷರಾಗಿ ಶಿರಾಳಕೊಪ್ಪ ಪಟ್ಟಣದ ಚಿಕ್ಕಪ್ಪ ಜೋಯ್ಸ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪಶು ಇಲಾಖೆ ನಿವೃತ್ತ ಅಧಿಕಾರಿ ಎಸ್.ಆರ್. ನಾಯಕ್ ಹಾಗೂ ಕವಲಿ ಗ್ರಾಮದ ತಾಪಂ ಮಾಜಿ ಸದಸ್ಯ ಕವಲಿ ಸುಬ್ರಮಣ್ಯ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ರವಿಕುಮಾರ ಎಂಜಿನಿಯರ್, ಸಂಘಟನಾ ಕಾರ್ಯದರ್ಶಿಯಾಗಿ ತಡಗಣಿ ದಿವಾಕರ್, ಖಜಾಂಚಿಯಾಗಿ ಶ್ರೀಧರ ಜೋಯ್ಸ್ ಆಯ್ಕೆಯಾದರು. ಕಾರ್ಯಕಾರಿಣಿ ಸದಸ್ಯರನ್ನಾಗಿ ಹಲವಾರು ಸಮಾಜದ ಪ್ರಮುಖರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.