ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ
ಕಪ್ರವಾರ್ತೆ, ಹೊಸನಗರ, ಮಾ.8
ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳನ್ನು ಪ್ರವೇಶಿಸುತ್ತಿದ್ದಾರೆ. ಈ ಹಂತದಲ್ಲಿ ಕಾನೂನಿನ ಅರಿವು ಮುಖ್ಯ ಎಂದು ಪ್ರಥಮದರ್ಜೆ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶರಾದ ಅನಿತಾ ಹೇಳಿದರು.
ಪಟ್ಟಣ ನ್ಯಾಯಾಲಯದ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಗಾರ ಉದ್ಘಾಟಿಸಿ, ಮಹಿಳೆಯ ಉತ್ತಮ ಬದುಕು ಮತ್ತು ಭದ್ರತೆಗೆ ಕಾನೂನು ಜ್ಞಾನ ಅಗತ್ಯವಿದೆ ಎಂದರು.
ಮಹಿಳೆ ಸುರಕ್ಷಿತಳಾಗಿಲ್ಲ ಎಂಬ ಕೂಗು ಇಂದಿಗೂ ಕೇಳಿ ಬರುತ್ತಿದೆ. ಕಾನೂನಿನ ಒಂದಷ್ಟು ಮಾಹಿತಿ ಹೊಂದಿದ್ದರೆ ದೌರ್ಜನ್ಯ ಎದುರಿಸಿ ಅದರಿಂದ ಮುಕ್ತಳಾಗಬಹುದಾಗಿದೆ ಎಂದರು.
ಕಾನೂನು ಅರಿವು ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸುವುದರೊಂದಿಗೆ ಮಾಹಿತಿ ಹೊಂದಬೇಕು ಎಂದು ಮನವಿ ಮಾಡಿದರು.
ಕೆ. ಸುರೇಶಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಮಾರುತಿ. ಬಿ ಮಾಂಗ್ಲಿ, ಕೂರಂಬಳ್ಳಿ ಷಣ್ಮುಖಪ್ಪ, ವಾಲೆಮನೆ ಶಿವಕುಮಾರ್, ನಂಜುಂಡಪ್ಪ, ಡಿ.ಎನ್. ಹಿರಿಯಪ್ಪ, ಮಹಾದೇವಪ್ಪ ಕಾನೂನಿನ ಮಾಹಿತಿ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.