ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರ ಅಗತ್ಯ

Parashurama
Updated On : 10 Mar 2013, 11:45 am

ಸಾಗರ: ಕೈಗಾರಿಕಾ ಕ್ಷೇತ್ರದಂತೆ ಕೃಷಿ ಕ್ಷೇತ್ರದಲ್ಲಿಯೂ ಆವಿಷ್ಕಾರಗಳು ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಉಂಟಾಗುವ ಅಪಾಯವಿದೆ ಎಂದು ಶ್ರೀ ಬಂಗಾರುಮಕ್ಕಿ ಕ್ಷೇತ್ರದ ಮಾರುತಿ ಗುರೂಜಿ ಹೇಳಿದರು.
   ಪಟ್ಟಣದ ವಿಶ್ವನಾಥ ಇಂಡಸ್ಟ್ರಿಯಲ್ ವರ್ಕರ್ಸ್ ಆವರಣದಲ್ಲಿ ಶನಿವಾರ ಸಂಜೆ ನಡೆದ ಸಂಸ್ಥೆಯ ಬೆಳ್ಳಿಹಬ್ಬ ಸಮಾರಂಭದಲ್ಲಿ ಸುಧಾರಿತ ಅಡಕೆ ಸುಲಿಯುವ(ಸಿಪ್ಪೆಗೋಟು) ಯಂತ್ರ ಅಕ್ಷಯವನ್ನು ಲೋಕಾರ್ಪಣೆಗೊಳಿಸಿ,  ಇಂದು ಕೃಷಿ ಕ್ಷೇತ್ರ ಹತ್ತು ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಮುಖ್ಯವಾಗಿ ಕಾರ್ಮಿಕರ ಸಮಸ್ಯೆ ಕೃಷಿ ಕ್ಷೇತ್ರವನ್ನು ಬಾಧಿಸುತ್ತಿದ್ದು ಯಂತ್ರಗಳ ಆವಿಷ್ಕಾರ ಇದಕ್ಕೆ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಸಮಾಲೋಚನೆ: ತಾಂತ್ರಿಕತೆ ಕೇವಲ ಓದಿನಿಂದಲೇ ಬರಬೇಕು ಎಂದೇನಿಲ್ಲ. ಹಿಂದೆಲ್ಲ ನಮ್ಮ ಪೂವರ್‌ಕರು ಅಶಿಕ್ಷಿತರಾಗಿದ್ದರೂ ಅವರಲ್ಲಿ ತಾಂತ್ರಿಕತೆಗೆ, ನೈಪುಣ್ಯತೆಗೆ ಕೊರತೆ ಇರಲಿಲ್ಲ. ಆದರೆ ಆಧುನಿಕ ಜಗತ್ತಿನ ನಾವುಗಳು ಹಿರಿಯರ ಅನುಭವ, ತಾಂತ್ರಿಕತೆ, ನೈಪುಣ್ಯತೆಯನ್ನು ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ ಅವರು, ಯುವಕರಿಗೆ ತಾಂತ್ರಿಕತೆಯ ಅರಿವು ನೀಡುವ ಕೆಲಸ ನಡೆಯಬೇಕು ಎಂದು ಆಶಿಸಿದರು. ನಾವು ಎಲ್ಲವನ್ನೂ ಹೋರಾಟದಿಂದಲೇ ಪಡೆಯಬೇಕಾದ ಕಾಲಘಟ್ಟದಲ್ಲಿದ್ದೇವೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಚಿಂತಕರೆಲ್ಲ ಕುಳಿತು ಸಮಾಲೋಚನೆ ನಡೆಸಿ ನೆಮ್ಮದಿಯಿಂದ ಎಲ್ಲವನ್ನು ಪಡೆದುಕೊಳ್ಳುವ ವಾತಾವರಣ ನಿರ್ಮಾಣವಾಬೇಕು. ಸ್ಥಳೀಯವಾಗಿರುವ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ಬೇಸಾಯಕ್ಕೆ ಹಿನ್ನಡೆ: ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್ ಮಾತನಾಡಿ, ಸಮಸ್ಯೆಗಳಿಂದಾಗಿ ಬೇಸಾಯವನ್ನು ಉದಾಸೀನ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
    ಸರ್ಕಾರದ ನೀತಿ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆ, ಮಾರುಕಟ್ಟೆ ಸಮಸ್ಯೆಗಳಿಂದಾಗಿ ಬೇಸಾಯಕ್ಕೆ ಹಿನ್ನಡೆ ಉಂಟಾಗುತ್ತಿದೆ. ಮಲೆನಾಡು ಭಾಗದಲ್ಲಿರುವ ಅಡಕೆ ಬೆಳೆಗಾರರು ಶ್ರೀಮಂತರು ಎನ್ನುವ ಕಲ್ಪನೆ ಇದೆ. ಆದರೆ ವಾಸ್ತವ ಸ್ಥಿತಿ ಹಾಗಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷ ಶೇ.30ರಷ್ಟು ಕೃಷಿಭೂಮಿಯಲ್ಲಿ ಬೇಸಾಯ ಮಾಡಿಲ್ಲ. ಜನರಲ್ಲಿ ಎಲ್ಲವನ್ನೂ ಕೊಂಡುಕೊಳ್ಳಬಹುದು ಎನ್ನುವ ಮನೋಭಾವ ಸೃಷ್ಟಿಯಾಗುತ್ತಿದೆ.
   ಇವೆಲ್ಲವುಗಳ ಬಗ್ಗೆ ಕೃಷಿಕರು, ಸರ್ಕಾರ, ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸಬೇಕು ಎಂದರಲ್ಲದೆ ಮ್ಯಾಮ್ಕೋಸ್ ಸಂಸ್ಥೆ ಅಡಕೆ ಕೃಷಿಗೆ ಸಂಬಂಧಿಸಿದಂತೆ ನಡೆಯುವ ಆವಿಷ್ಕಾರಗಳಿಗೆ 50ಸಾವಿರ ರು. ಆರ್ಥಿಕ ಸಹಾಯ ಮಾಡುತ್ತಿದೆ ಎಂದು ಹೇಳಿದರು.
 ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಗ್ರಾಮೀಣ ಬದುಕು ದುಸ್ತರವಾಗುತ್ತಿದ್ದು ಗ್ರಾಮವಾಸಿಗಳು ನಗರಗಳತ್ತ ಮುಖ ಮಾಡುವ ಕಾಲ ಬಂದಿದೆ. ಅಡಕೆ ಕೃಷಿಕನ ಬದುಕಂತೂ ಮತ್ತಷ್ಟು ಆತಂಕದಲ್ಲಿದೆ. ಸಮಸ್ಯೆಗಳಿಂದಾಗಿ ಅಡಕೆ ಕೃಷಿಕರು ದಿಕ್ಕುದೆಸೆ ಇಲ್ಲದ ಸ್ಥಿತಿಯಲ್ಲಿದ್ದಾರೆ. ಕೃಷಿ ದೇಶದ ಮುಖ್ಯ ಕಸುಬಾಗಿದ್ದರೂ ಸರ್ಕಾರ ಈ ಕ್ಷೇತ್ರಕ್ಕೆ ನೀಡಬೇಕಾದಷ್ಟು ಆದ್ಯತೆಯನ್ನು ನೀಡುತ್ತಿಲ್ಲ ಎಂದರಲ್ಲದೆ ಕೃಷಿ ಯಂತ್ರೋಪಕರಣಗಳ ಮೂಲ ಬೆಲೆಗೆ ಸರ್ಕಾರ ಸಬ್ಸಿಡಿ ಕೊಡಬೇಕು ಎಂದು ಒತ್ತಾಯಿಸಿದರು.
 ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್, ಆಪ್ಕೋಸ್ ಅಧ್ಯಕ್ಷ ಆರ್.ಎಸ್. ಗಿರಿ, ತೋಟಗಾರ್ಸ್ ಅಧ್ಯಕ್ಷ ಕೆ.ಸಿ. ದೇವಪ್ಪ, ಯಂತ್ರವನ್ನು ವಿನ್ಯಾಸಗೊಳಿಸಿದ ಎಂ. ರಾಮಸ್ವಾಮಿ, ವಿಶ್ವನಾಥ ಇಂಡಸ್ಟ್ರಿ ಮುಖ್ಯಸ್ಥ ವಿ.ನಾ. ಕೃಷ್ಣಮೂತರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments