ಚುನಾವಣೆ ದೃಷ್ಟಿಯಿಂದ ಬಜೆಟ್
ಶಿವಮೊಗ್ಗ: ಸೇವಾ ತೆರಿಗೆ ಆಕ್ಟ್ ಪ್ರಕಾರ ಈ ಬಾರಿಯ ಬಜೆಟ್ನಲ್ಲಿ ಸೇವಾ ತೆರಿಗೆ ನಿಯಮಗಳನ್ನು ಜಾರಿಗೊಳಿಸಬಹುದಿತ್ತು ಎಂದು ಚಾಟೆಂಡ್ ಅಕೌಂಟೆಡ್ ಜಿ.ಎಂ. ಚನ್ನಪ್ಪಶೆಟ್ಟಿ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೇಂದ್ರ ಶನಿವಾರ ಆಯೋಜಿಸಿದ್ದ ಮುಂಗಡ ಪತ್ರ ಅವಲೋಕನ ಕಾರ್ಯಕ್ರಮದಲ್ಲಿ ಸೇವಾ ತೆರಿಗೆ ವಿಷಯ ಕುರಿತಂತೆ ಮಾತನಾಡಿದ ಅವರು, 2013ರ ಬಜೆಟ್, ಮುಂಬರುವ ಚುನಾವಣೆಯ ದೃಷ್ಟಿಯಿಂದ ಮಂಡನೆ ಮಾಡಲಾಗಿದೆ. ಯಾವುದೇ ಹೊಸ ನಿಯಮಗಳು ಜಾರಿಯಾಗಿಲ್ಲ. ಕಳೆದ ಬಾರಿಗಿಂತ ಈ ಬಾರಿ ಶೇ.6ರಷ್ಟು ಸೇವಾ ತೆರಿಗೆ ಹೆಚ್ಚಿಸಲಾಗಿದೆ ಎಂದರು.
ಬೊಕ್ಕಸ ತುಂಬಲು ಬಜೆಟ್: ಖಾಸಗಿ ಮತ್ತು ಸರ್ಕಾರದ ಬಜೆಟ್ಗೆ ವ್ಯತ್ಯಾಸವಿರುತ್ತದೆ. ಖಾಸಗಿ ಬಜೆಟ್ನಲ್ಲಿ ಏಕವ್ಯಕ್ತಿಯ ಆಯವ್ಯಯ ಮನಗಂಡು ಬಜೆಟ್ ಮಾಡಲಾಗುತ್ತದೆ.
ಆದರೆ, ಸರ್ಕಾರದ ಮುಂಗಡ ಪತ್ರದಲ್ಲಿ, ರಾಷ್ಟ್ರದ ಒಟ್ಟಾರೆ ಜನರ ವಾರ್ಷಿಕ ಆಯವ್ಯಯವನ್ನು ಪರಿಶೀಲಿಸಿ ನಂತರ ಬಜೆಟ್ ಮಂಡನೆ ಮಾಡಲಾಗುತ್ತದೆ. ಅದರೊಂದಿಗೆ ಸರ್ಕಾರದ ಬೊಕ್ಕಸ ತುಂಬಲು ಆರ್ಥಿಕ ಸಂಪನ್ಮೂಲ ಹೇಗೆ ಹೆಚ್ಚಿಸಬೇಕು ಎಂದು ತೀರ್ಮಾನಿಸಿ, ನಂತರ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಆದಾಯ ತೆರಿಗೆ ವಿಷಯದ ಬಗ್ಗೆ ವಿಶ್ಲೇಷಿಸಿದ ಚಾಟೆಂಡ್ ಅಕೌಂಟೆಂಟ್ ಶರತ್, ವಿತ್ತ ಸಚಿವ ಚಿದಂಬರಂ ಅವರ 2013ರ ಬಜೆಟ್ನಲ್ಲಿ ಹೊರ ತೆರಿಗೆ ನೀತಿ ಜಾರಿ ಮಾಡಿಲ್ಲ. ಹಾಗೆಯೇ ಹಳೆಯ ನೀತಿಗಳನ್ನು ಕೈಬಿಟ್ಟಿಲ್ಲ. ಪಾವತಿ ವಂಚಿಸುವ ಕೆಲ ಖಾಸಗಿ ಕಂಪನಿಗಳ ಆದಾಯ ತೆರಿಗೆ ವಿಷಯದಲ್ಲಿ ಸ್ವಲ್ಪ ಕಠಿಣ ಕ್ರಮಕೈಗೊಳ್ಳಲಾಗಿದೆ ಎಂದರು.
ಸಂಘದ ಅಧ್ಯಕ್ಷ ಮಹೇಂದ್ರಪ್ಪ, ಆಡಳಿತ ಪಕ್ಷಗಳು ತಮ್ಮದೇ ಆದ ಛಾಪು ಮೂಡಿಸಲು ಪ್ರಯತ್ನ ಮಾಡಿವೆ. ದೇಶದ ನದಿ ಜೋಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಎಡವಿದೆ. ರೈಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ.
ಕೇಂದ್ರದ ಎರಡು ಬಜೆಟ್ ತಮ್ಮ ಉಳಿವಿಗಾಗಿ ಮಾಡಿರುವ ಬಜೆಟ್ ಆಗಿವೆ ಎಂದರು.
ಮೌಲ್ಯಾಧರಿತ ತೆರಿಗೆ ಕುರಿತಂತೆ ಜಿ.ಬಿ. ಮಂಜಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಮಧುಸೂದನ್ ಐತಾಳ್, ಸಂಘದ ಸದಸ್ಯರು ಮತ್ತಿತರರು ಈ ಸಂದರ್ಭದಲ್ಲಿ ಕಾರ್ಯಕ್ರದಲ್ಲಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.