ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಹಿಳೆಯರು ಉದ್ಯೋಗ ಹುಡುಕದೆ ಉದ್ಯಮಿಗಳಾಗಿ

Parashurama
Updated On : 10 Mar 2013, 11:45 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.9
ಮಹಿಳೆಯರು ಉದ್ಯೋಗ ಹುಡುಕುವ ಬದಲು ಉದ್ಯಮಿಗಳಾಗುವಂತೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಸ್.ಎ. ಬಾರಿಯವರು ಸಲಹೆ ನೀಡಿದರು.
ಅವರು ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರೊ.ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ  ಸಮಾರಂಭದ ಅಧ್ಯಕ್ಷತೆ ವಹಿಸಿ, ಮಹಿಳೆಯರು ಪದವಿ ಪಡೆದ ತಕ್ಷಣವೇ ಸರ್ಕಾರಿ ಅಥವಾ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಬೇಕೆಂಬ ಆಸೆ ಹೊತ್ತು ಅದಕ್ಕಾಗಿ ದೀರ್ಘ ಕಾಲ ಕಾಲಹರಣ ಮಾಡಿ ಉದ್ಯೋಗ ಸಿಗದೆ ನಿರಾಶರಾಗುವ ಬದಲು ಸ್ವಯಂ ಉದ್ಯಮ ಪ್ರಾರಂಭಿಸಿ ತಮ್ಮ ಕಾಲ ಮೇಲೆ ತಾವು ಸದೃಢವಾಗಿ ನಿಲ್ಲುವಂತಾಗಬೇಕೆಂದು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಿಂದ ಉಪನ್ಯಾಸ ಏರ್ಪಡಿಸವುದರ ಜೊತೆಯಲ್ಲಿ ಸ್ವಯಂ ಅನುಭವವುಳ್ಳ ಉದ್ಯಮಿಗಳನ್ನು ಕರೆಸಿ ಅವರ ಅನುಭವವನ್ನು ಇಲ್ಲಿ ಹಂಚಿಕೊಂಡಾಗ ನಮ್ಮ ವಿದ್ಯಾರ್ಥಿಗಳಿಗೆ ಅದರಿಂದ ಉತ್ತೇಜನ ದೊರೆಯುತ್ತದೆ ಎಂದರು.
ಛಲ ಇರಲಿ: ಶಿವಮೊಗ್ಗದ ಮಥುರಾ ಫುಡ್ ಪ್ರಾಡಕ್ಟ್ಸ್‌ನ ಲಕ್ಷ್ಮೀದೇವಿ ಗೋಪಿನಾಥ್, ತೊಟ್ಟಿಲಿನಿಂದ ಹಿಡಿದು ತೊಟ್ಟಿಲು ತೂಗುವವರೆಗಿನ ಮಹಿಳೆಯ ಪಾತ್ರ ಬಹುದೊಡ್ಡದು.   ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತಾನು ಅಸಹಾಯಕಿ ಎಂದು  ಭಾವಿಸಲು ಅವಳಲ್ಲಿರುವ ಆತ್ಮವಿಶ್ವಾಸದ ಕೊರತೆಯೇ ಕಾರಣ. ಸೋಲನ್ನು ಹಿಮ್ಮೆಟ್ಟಿಸುವ ಛಲ ಅವಳಲ್ಲಿರಬೇಕೆಂದರು.  ಡಾ. ಹಸೀನಾ ಅವರ ಅಕ್ಷರ ಅರಿವು ಮತ್ತು ಮಹಿಳೆ ಎಂಬ ಪುಸ್ತಕವನ್ನು ಪ್ರೊ.ಎಸ್.ಎ. ಬಾರಿ ಬಿಡುಗಡೆ ಮಾಡಿದರು. ಪುಸ್ತಕದ ಕುರಿತು ಡಾ.ಜಿ. ಪ್ರಶಾಂತ್ ನಾಯಕ್ ಮಾತನಾಡಿದರು.  ಕುಲಸಚಿವ ಪ್ರೊ.ಎ. ರಾಮೇಗೌಡ, ಹಣಕಾಸು ಅಧಿಕಾರಿ ಪ್ರೊ.ಆರ್. ಹಿರೇಮಣಿನಾಯ್ಕ್, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಎಂ. ವೆಂಕಟೇಶ್ವರಲು ಇದ್ದರು. ಡಾ. ರೇಚಲ್ ಬಾರಿ ಸ್ವಾಗತಿಸಿದರು. ರೋಹಿತ್ ವಂದಿಸಿದರು. ಮೇಘಾ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments