ಕೆಜೆಪಿ, ಕಾಂಗ್ರೆಸ್ ಸಮಬಲ
ಶಿರಾಳಕೊಪ್ಪ: ಪಪಂಗೆ ನಡೆದ ಚುನಾವಣೆಯಲ್ಲಿ ಕೆಜೆಪಿ ಮತ್ತು ಕಾಂಗ್ರೆಸ್ ಸಮಬಲ ಹೊಂದುವುದರ ಮೂಲಕ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿಯ ಪಪಂ ಒಟ್ಟು 15ಸ್ಥಾನ ಹೊಂದಿದ್ದು, ಚುನಾವಣೆಯಲ್ಲಿ ಕೆಜೆಪಿ 5, ಕಾಂಗ್ರೆಸ್ 5, ಬಿಎಸ್ ಆರ್ ಕಾಂಗ್ರೆಸ್ 1 ಸ್ಥಾನ,ಜೆಡಿಎಸ್ 1ಸ್ಥಾನ ಹಾಗು ಪಕ್ಷೇತರರು ಮೂರು ಸ್ಥಾನಗಳಿಸಿ ಯಾವುದೇ ಪಕ್ಷ ಬಹುಮತಪಡೆಯಲು ಪಕ್ಷೇತರರ ಸಹಕಾರ ಪಡೆಯಬೇಕಾಗಿದೆ.
ಕಳೆದಬಾರಿ ಪಪಂನ್ನು ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿ ಇಂದು ಒಂದೂ ಸ್ಥಾನ ಪಡೆಯದೇ ಹೀನಾಯ ಸೋಲು ಅನುಭವಿಸಿದೆ. ಈಗ ಪಪಂನಲ್ಲಿ ಅತಂತ್ರ ಸ್ಥಿತಿ ಉಂಟಾಗಿ ಯಾವ ಪಕ್ಷ ಅಧಿಕಾರಕ್ಕೆ ಬರುವುದೋ ಕಾದು ನೋಡಬೇಕಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಪಕ್ಷೇತರರ ಸಹಕಾರ ಮುಖ್ಯ ಎಂಬಂತಾಗಿದೆ.
ಈ ಚುನಾವಣೆಯಲ್ಲಿ 11ನೇವಾರ್ಡಿನ ಎಚ್.ಎಂ. ಚಂದ್ರಶೇಖರ, 14 ನೇ ವಾರ್ಡಿನ ರಟ್ಟಿಹಳ್ಳಿ ಲೋಕೇಶ್ ಕಾಂಗ್ರೆಸ್ 4ನೇ ವಾರ್ಡ್ನ ಸಮಿಉಲ್ಲಾ, 7ನೇ ವಾರ್ಡ್ನ ಗೀತಾ ಕೇದಾರೇಶ್ವರ ಈ ಚುನಾವಣೆಯಲ್ಲಿ ಎರಡನೇ ಬಾರಿ ಚುನಾಯಿತರಾಗಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಗೆದ್ದವರು: 1ನೇ ವಾರ್ಡ್- ಪಕ್ಷೇತರ, ಮಂಜುನಾಯ್ಕ ಬಿಎಲ್, 2ನೇವಾರ್ಡ್ -ಕೆಜಿಪಿಯ ಮಹಬಲೇಶ್ವರ, 3 ನೇ ವಾರ್ಡ್ - ಕೆಜೆಪಿಯ ಭಾರತಿ, 4ನೇ ವಾರ್ಡ್ -ಎ. ಸಮಿಉಲ್ಲಾ ಖಾನ್, 5ನೇ ವಾರ್ಡ್ - ಪಕ್ಷೇತರ ಅವಿರೋಧ ಆಯ್ಕೆ ನೂರ್ ಜಹಾನ್, 6ನೇವಾರ್ಡ್ -ಮನ್ಸೂರ್ ಅಲಿ, 7ನೇ ವಾರ್ಡ್- ಕಾಂಗ್ರೆಸ್ ಬಿ. ಗೀತಾ, 8 ನೇ ವಾರ್ಡ್ - ಕೆಜೆಪಿ ಎಚ್.ಎಂ. ಚಂದ್ರಶೇಖರ, 9 ನೇವಾರ್ಡ್ - ಕಾಂಗ್ರೆಸ್ ಪಿ. ಜಾಫರ್, 10 ನೇ ವಾರ್ಡ್- ಕಾಂಗ್ರೆಸ್ ಜಮೀಲಾ ಖಾತೂನ್, 11ನೇ ವಾರ್ಡ್ - ಪಕ್ಷೇತರ ಎಂ.ಆರ್. ರಾಘವೇಂದ್ರ, 12 ನೇ ವಾರ್ಡ್, ಕಾಂಗ್ರೆಸ್ ಮಹಿಬುಲ್ಲಾ, 13ನೇ ವಾರ್ಡ್- ಜೆಡಿಎಸ್ ರಶೀದಾ ಬೇಗಂ, 14ನೇ ವಾರ್ಡ್- ಕೆಜೆಪಿ ರಟ್ಟಿಹಳ್ಳಿ ಲೋಕೇಶ್, 15ನೇ ವಾರ್ಡ್- ಬಿಎಸ್ಆರ್ ಸುಮಾ ರಾಜಶೇಖರ ಆಯ್ಕೆಆಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.