ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೋತಿ ಶವ ಸಂಸ್ಕಾರ

Lingaraj Badiger
Updated On : 14 Mar 2013, 10:46 am

ಶಿವಮೊಗ್ಗ: ಸತ್ತ ಮಂಗನಿಗೂ ಮನುಷ್ಯರಂತೆ ಧಾರ್ಮಿಕ ವಿಧಿವಿಧಾನಗಳಿಂದ ಶವ ಸಂಸ್ಕಾರ ಮಾಡುವ ಮೂಲಕ ಇಲ್ಲಿನ ವಿದ್ಯಾನಗರದ ಜನತೆ ಮಾನವೀಯತೆ ಮೆರೆದ ಘಟನೆ ಬುಧವಾರ ನಡೆದಿದೆ. ಇಲ್ಲಿನ ವಿದ್ಯಾನಗರದ ಚೌಡೇಶ್ವರಿ ಬೀದಿಯಲ್ಲಿರುವ ಶಿರಾಳಕೊಪ್ಪದ ಸರ್ಕಾರಿ ಕಾಲೇಜು ಪ್ರಾಂಶುಪಾಲರಾದ ಸಿ. ಚಂದ್ರಶೇಖರ್ ಅವರ ಮನೆಯ ಹಿಂಭಾಗ ಕಾಪೌಂಡ್ ಒಳಗೆ ಮಂಗ ಸತ್ತು ಬಿದಿತ್ತು. ಈ ವಿಷಯ ತಿಳಿದ ಅಲ್ಲಿನ ಯುವಕರು ಮಂಗನ ಶವವನ್ನು ತೆಗೆದುಕೊಂಡು ಬಂದು ಮನುಷ್ಯರಂತೆ ಸ್ನಾನ ಮಾಡಿಸಿ, ಪೂಜೆ, ಹಾಲಿನಿಂದ ಅಭಿಷೇಕ, ಹೂವಿನ ಹಾರ ಹಾಕಿದ್ದರು. ಜನರಿಂದ ಹಣ ಸಂಗ್ರಹಿಸಿ ಅಂತಿಮ ಸಂಸ್ಕಾರ ಮಾಡಲಾಯಿತು. ಮನುಷ್ಯರಂತೆ ಅದಕ್ಕೂ ಶವ ಸಂಸ್ಕಾರ ಮಾಡಲಾಗುವುದು. 11ನೇ ದಿನದ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಲಾಗುವುದು ಎಂದು ಯುವಕರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement