ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಕ್ರಮ ಟಾರ್ ದಂಧೆ

Rashmi Kasaragodu
Updated On : 15 Mar 2013, 12:00 pm

ಕ.ಪ್ರ. ವಾರ್ತೆ ಹೊಸನಗರ ಮಾ. 14-
ತಾಲೂಕಿನ ನಗರ ಹೋಬಳಿಯಲ್ಲಿ ಅಕ್ರಮ ಟಾರ್ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಕಡಿವಾಣ ಇಲ್ಲದಂತಾಗಿದೆ.

ನಗರ ಸಮೀಪದ ಶಾಂತಿಕೆರೆ, ಹಿಲ್ಕುಂಜಿ ಮತ್ತು ಮಾಸ್ತಿಕಟ್ಟೆ ಬಳಿಯ ಹುಲಿಕಲ್ ರಸ್ತೆಯ ಆಸುಪಾಸಿನಲ್ಲಿ  ಮಂಗಳೂರಿನಿಂದ ಬರುವ ಟ್ಯಾಂಕರ್‌ಗಳಿಂದ ಟಾರ್ ಇಳಿಸಿ ಅದಕ್ಕೆ ಸುಟ್ಟ ಆಯಿಲ್ ಇತರ ಪದಾರ್ಥ ಕಲಬೆರಕೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಲಕ್ಷಾಂತರ ರುಪಾಯಿ ವಹಿವಾಟು: ರಸ್ತೆ ಪಕ್ಕದಲ್ಲೇ ಇಳಿಸಿ ಟಾರ್ ತಣ್ಣಗಾದ ಕೂಡಲೇ ಅಲ್ಲಿಂದ ಸಾಗಿಸುವುದು, ಟ್ಯಾಂಕರ್‌ನಿಂದ ಕಡಿಮೆ ದರದಲ್ಲಿ ಇಳಿಸಿ ಕಲಬೆರಕೆ ಮಾಡಿ ಲಕ್ಷಾಂತರ ರುಪಾಯಿ ವಹಿವಾಟು ನಡೆಸಲಾಗುತ್ತಿದೆ. ಇಲ್ಲಿ ಶೇಖರಣೆ ಮಾಡಿದ ಟಾರನ್ನು ಗುತ್ತಿಗೆದಾರರನ್ನು ಬುಕ್ ಮಾಡಿ ಅವರಿಗೆ ಸರಬರಾಜು ಮಾಡಲಾಗುತ್ತಿದೆ. ಕಲಬೆರಕೆ ಮಾಡುವುದರಿಂದ ರಸ್ತೆ ಡಾಂಬರೀಕರಣ ಕೂಡ ಕಳಪೆಯಾಗುತ್ತಿದ್ದು ಇದಕ್ಕೆ ಅಕ್ರಮ ದಂಧೆಯೇ ಕಾರಣ ಎನ್ನಲಾಗುತ್ತಿದೆ.

ರಾತ್ರಿ ವೇಳೆ ಅಕ್ರಮ ದಂಧೆಗೆ ಕೈ ಹಾಕುವ ಲೂಟಿಕೋರರು ಸ್ಥಳೀಯರು ಅದನ್ನು ತಡೆಯಲು ಮುಂದಾದರೆ ಧಮಕಿ ಹಾಕುತ್ತಾರೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಪೊಲೀಸ್ ಇಲಾಖೆಗೆ ಗೊತ್ತಿದೆಯೋ ಇಲ್ಲವೋ,  ಗೊತ್ತಿದ್ದರೂ ಸುಮ್ಮನಿದ್ದಾರೋ ಎಂಬ ಅನುಮಾನ ಸ್ಥಳೀಯರಿಗೆ ಯಕ್ಷಪ್ರಶ್ನೆಯಾಗಿದೆ.

ಗಡಿ ಭಾಗಗಳಿಗೆ ರವಾನೆ: ಟ್ಯಾಂಕರ್‌ನಿಂದ ಟಾರ್ ಇಳಿಸಿದ ಕೂಡಲೆ ಅದನ್ನು ಪ್ಯಾಕಪ್ ಮಾಡಿ ಸಾಗಿಸಲು ಸಾಧ್ಯವಿಲ್ಲ.
ತುಂಬ ಬಿಸಿಯಾಗಿರುವುದೇ ಇದಕ್ಕೆ ಕಾರಣ. ರಾತ್ರಿ ಅಲ್ಲೇ ಬಿಟ್ಟು ಬೆಳಿಗ್ಗೆ ಅಲ್ಲಿಂದ ಸಾಗಿಸಲಾಗುತ್ತದೆ. ಹೊಸನಗರ ಸಾಗರ ಗಡಿಭಾಗ ತುಂಬ್ರಿ ಬ್ಯಾಕೋಡು, ತಾಲೂಕಿನ ಕೋಡೂರು, ಬಟ್ಟೆಮಲ್ಲಪ್ಪ ಇತರ ಪ್ರದೇಶಕ್ಕೆ ಸಾಗಿಸಲಾಗುತ್ತದೆ.

ಕಡಿವಾಣ ಹಾಕಿ: ರಸ್ತೆಗಳು ಕಳಪೆಯಾಗುತ್ತಿರುವುದಕ್ಕೆ ಅಕ್ರಮ ಟಾರ್ ದಂಧೆಯೇ ಪ್ರಮುಖ ಕಾರಣವಾಗಿದೆ. ಇದರಿಂದ ಲಕ್ಷಾಂತರ ರುಪಾಯಿ ಹಣ ದೋಚಲಾಗುತ್ತಿದೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಸ್ಥಳೀಯರ ಒತ್ತಾಯ. ಆದರೆ ಪ್ರತಿಭಟನೆಗಿಳಿದರೆ ಎಲ್ಲಿ ಲೂಟಿಕೋರರ ಕಣ್ಣಿಗೆ ಬೀಳುತ್ತೇವೋ ಎಂಬ ಭಯ ಅವರನ್ನು ಕಾಡುತ್ತಿದೆ.

ಅಕ್ರಮ ಟಾರ್ ದಂಧೆ ಮಾಡುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಲೂಟಿ ಮಾಡುವವರು ರಾತ್ರಿ ವೇಳೆ ಆಯ್ದುಕೊಳ್ಳುತ್ತಿರುವುದು ಮತ್ತು ಸ್ಥಳ ಬದಲಿಸುತ್ತಾ ತಪ್ಪಿಸಿಕೊಳ್ಳುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಗಾ ವಹಿಸಲಾಗುವುದು.
- ಸಂದೀಪ್, ಪಿಎಸ್‌ಐ, ನಗರಠಾಣೆ

- ರವಿ ಬಿದನೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement