ಇಂದು ಮಹಿಳಾ ದಿನಾಚರಣೆ
ಶಿವಮೊಗ್ಗ: ನಿರ್ಮಲ ಸೇವಾ ಕೇಂದ್ರ, ನಿರ್ಮಲ ಮಹಿಳಾ ಮಂಡಳಿಗಳ ಒಕ್ಕೂಟ 16ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 10.30ಕ್ಕೆ ನಿರ್ಮಲ ಸೇವಾಕೇಂದ್ರದಿಂದ ಮಹಿಳಾ ಜಾಥಾ ನಡೆಯಲಿದ್ದು, ಸ್ವಾತಿ ಕೌಶಲೇಂದ್ರ ಕುಮಾರ್ ಜಾಥಾ ಉದ್ಘಾಟಿಸುವರು.
12ಗಂಟೆಗೆ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿರುವ ಸ್ನೇಹ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮಕ್ಕೆ ಡಿಸಿಎಂ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಯೇಸು ರಕ್ಷಕನಾಥನ್ ಅಧ್ಯಕ್ಷತೆ ವಹಿಸುವರು.
ಸೌಮ್ಯ ಬನ್ಸಲ್, ಶಾರದಾ ಪೂರ್ಯಾನಾಯ್ಕ, ಉಪನ್ಯಾಸಕಿ ಕಿರಣ ದೇಸಾಯಿ, ಡೆಮಿಯನ್ ಉಪಸ್ಥಿತರಿರುವರು ಎಂದು ನಿರ್ಮಲ ಸೇವಾ ಕೇಂದ್ರ ತಿಳಿಸಿದೆ.