ನಾಳೆ ಕಾರ್ಯಾಗಾರ
ಶಿವಮೊಗ್ಗ: 10ನೇ ತರಗತಿ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮತ್ತು ಸಂಪೂರ್ಣ ಕನ್ನಡ ವ್ಯಾಕರಣದ ಕುರಿತಾಗಿ ಒಂದು ದಿನದ ಕಾರ್ಯಾಗಾರವನ್ನು ಸಿಎನ್ ಕೋಚಿಂಗ್ ಸೆಂಟರ್ ಹಮ್ಮಿಕೊಂಡಿದೆ. 17ರಂದು ಶಿವಮೊಗ್ಗ ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಕಾರ್ಯಾಗಾರ ನಡೆಯಲಿದ್ದು, ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು. ಮೊ-9901923273.
18ಕ್ಕೆ ಹೃದಯ ಕುರಿತು ಉಪನ್ಯಾಸ
ಶಿವಮೊಗ್ಗ: ಕರ್ನಾಟ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಪಿಂಚಣಿದಾರರ ಸಂಘ 18ರಂದು ಹೃದ್ರೋಗ ಮತ್ತು ಜೀವನ ಶೈಲಿ ಕುರಿತು ಉಪನ್ಯಾಸ ಹಮ್ಮಿಕೊಂಡಿದೆ. ಸಹ್ಯಾದ್ರಿ ನಾರಾಯಣ ಹೃದಯಾಲಯದ ತಜ್ಞ ಡಾ.ಸುಧೀರ್ ಭಟ್ ಉಪನ್ಯಾಸ ನೀಡಲಿದ್ದಾರೆ.
ಹೃದ್ರೋಗಗಳು, ಹೃದಯ ಶಸ್ತ್ರಚಿಕಿತ್ಸೆಗಳು ಮತ್ತು ಹೃದ್ರೋಗ ತಡೆಗಟ್ಟುವ ಬಗ್ಗೆ ಅನುಸರಿಸಬೇಕಾದ ಜೀವನ ಶೈಲಿಯ ಕುರಿತು ಪ್ರಾತ್ಯಕ್ಷಿಕೆಯಂದಿಗೆ ಮಾಹಿತಿ ನೀಡಿ ಸಂವಾದ ನಡೆಸಿಕೊಡುವರು.
ಮೆಸ್ಕಾಂ ವೃತ್ತ ಕಚೇರಿ ಸಂಕೀರ್ಣದಲ್ಲಿರುವ ಸಭಾಂಗಣ ಕೊಠಡಿಯಲ್ಲಿ ಅಂದು ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯುವುದು ಎಂದು ಆಯೋಜಕ ಸಂಘಟನೆಯ ಅಧ್ಯಕ್ಷ ಬಿ.ಎಚ್. ನಾಗರಾಜ ತಿಳಿಸಿದ್ದಾರೆ.