ಕಾನೂನಿನ ಅರಿವು ಎಲ್ಲರಿಗೂ ಅನಿವಾರ್ಯ
ತೀರ್ಥಹಳ್ಳಿ: ಕಾನೂನಿನ ವಿಷಯದ ಬಗ್ಗೆ ಅರಿವು, ಅಧ್ಯಯನ ಮಾಡಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅಭಿಪ್ರಾಯಪಟ್ಟರು.
ತೀರ್ಥಹಳ್ಳಿಯ ನ್ಯಾಯಾಲಯ ಕಟ್ಟಡ ಸಮುಚ್ಚಯ ನಿರ್ಮಾಣದ ಶಿಲಾನ್ಯಾಸ ಹಾಗೂ ಹಿರಿಯ ಪ್ರಥಮ ಧರ್ಜೆ ನ್ಯಾಯಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ನ್ಯಾಯಾಂಗಕ್ಕೆ ಧಕ್ಕೆ ಬರದಂತೆ ಜನರ ವಿಶ್ವಾಸ ಉಳಿಸಿಕೊಳ್ಳುವಂತೆ ವಕೀಲರು ಕರ್ತವ್ಯ ನಿರ್ವಹಿಸಬೇಕು. ಬರೀ ಹಣ ಗಳಿಸುವ ಸಾಧನ ವಕೀಲಿ ವೃತ್ತಿ ಆಗಬಾರದು. ವೃತ್ತಿ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ಬರೀ ನ್ಯಾಯಾಲಯದ ಕಲಾಪಗಳಲ್ಲೇ ಮುಳಗಿಹೋಗುವ ವಕೀಲರು ಸಾರ್ವಜನಿಕ ಹಿತಾಸಕ್ತಿಯ ಇತರೆ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆಯೂ ಗಮನಹರಿಸಬೇಕು. ಹೆಚ್ಚು ಅನುದಾನಗಳು ಬರುವ ಜಿಪಂ ಮುಂತಾದ ಕಡೆ ಸಾರ್ವಜನಿಕ ಹಣ ಪೋಲಾಗುತ್ತಿರುವ ಬಗ್ಗೆ ಕಣ್ತೆರೆಸುವಂತಾಗಬೇಕು ಎಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎಂ. ಶೆಟ್ಟರ ಇದ್ದರು. ತೀರ್ಥಹಳ್ಳಿ ಹಿರಿಯ ಪ್ರಥಮ ಧರ್ಜೆ ನ್ಯಾಯಾಲಯದ ನ್ಯಾಯಾಧೀಶ ಎಚ್.ಎ. ಮೋಹನ್, ಕಿರಿಯ ವಿಭಾಗದ ನ್ಯಾಯಾಧೀಶ ಶಿವನಗೌಡ, ಹೆಚ್ಚುವರಿ ನ್ಯಾಯಾಧೀಶ ರಾಘವೇಂದ್ರ, ಶಾಸಕ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ಬಿ.ಟಿ. ಕಾಂತರಾಜ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.