ನಂಬಿಕೆ, ವಿಶ್ವಾಸದೊಂದಿಗೆ ಸೇವೆ ಸಲ್ಲಿಸಿ: ನ್ಯಾ. ಎನ್.ಕೆ. ಪಾಟೀಲ್ ಸಲಹೆ
ಕ.ಪ್ರಭ ವಾರ್ತೆ, ಸೊರಬ, ಮಾ.16
ನಂಬಿಕೆ, ವಿಶ್ವಾಸ, ಪಾಲ್ಗೊಳ್ಳುವಿಕೆಯೊಂದಿಗಿನ ನಿಮ್ಮ ಸೇವೆಯಲ್ಲಿ ತೃಪ್ತಿ ಇದೇ ಎಂದಾದಲ್ಲಿ ನಿಮಗೆ ಸಕಾರಾತ್ಮಕ ಫಲಿತಾಂಶ ದೊರೆಯುವುದರಲ್ಲಿ ಸಂದೇಹವೆ ಇಲ್ಲ ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ತಿಳಿಸಿದರು.
ಪಟ್ಟಣ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಭವನದ ಶಂಕುಸ್ಥಾಪನೆ ಹಾಗೂ ನ್ಯಾಯಾಲಯದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಿರಿಯ ವಕೀಲರಿಗೆ ಗೌರವಿಸದಿದ್ದಲ್ಲಿ ನಿಮಗೆ ಸಕಾಲಿಕ ಸಲಹೆಗಳು ದೊರೆಯಲಾರದು. ನೀವು ಕಠಿಣ ಪರಿಶ್ರಮದ ಮೂಲಕ ನಿಷ್ಟುರರಾಗಿ ಕಾರ್ಯ ನಿರ್ವಹಿಸಿದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದು ಕಿರಿಯ ವಕೀಲರಿಗೆ ಕಿವಿಮಾತನಾಡಿದರು.
ಅವರು ಕೋರ್ಟ್ ಆವರಣದಲ್ಲಿ 2 ಗಿಡಗಳನ್ನು ನಡುವ ಮೂಲಕ ಹಸಿರು- ಉಸಿರು ಎಂಬುದನ್ನು ನೆನಪಿಸಿಕೊಟ್ಟರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ರುದ್ರಪ್ಪ ಹಾಗೂ ಲೋಕೋಪಯೋಗಿ ಅಧೀಕ್ಷಕ ಅಭಿಯಂತರ ಬಿ.ಟಿ. ಕಾಂತರಾಜ್ ನ್ಯಾಯಾಲಯದ ವಿವಿಧ ಕಾಮಗಾರಿಗಳಿಗೆಂದು ನ್ಯಾಯಾಂಗ ಇಲಾಖೆಯಿಂದ 1.5 ಕೋಟಿ ಮಂಜೂರಾಗಿರುವ ಕುರಿತು ತಿಳಿಸಿ, ಕಾಮಗಾರಿ ವಿವರ ನೀಡಿದರು.
ಸಾಗರದ ಹಿರಿಯ ವಕೀಲ ಎಂ.ಬಿ. ಪುಟ್ಟಸ್ವಾಮಿ, ಇಲ್ಲಿನ ವಕೀಲರುಗಳಾದ ಎಂ.ಆರ್. ಪಾಟೀಲ್, ಎಂ. ನಾಗಪ್ಪ, ಸಿ. ಶಿವಕುಮಾರ್, ಹೆಚ್. ಇಂದೂಧರ ಒಡೆಯರ್, ವಿ.ಪಿ. ಖರೆ, ಡಿ.ಕೆ. ಪರಶುರಾಮ್, ವೈ.ಜಿ. ಪುಟ್ಟಸ್ವಾಮಿ, ಸುಧಾಕರ ಪಿ. ನಾಯ್ಕ್, ಡಿ.ವಿ. ಭಾವೆ, ಡಾಕಪ್ಪ ಹೆಸರಿ, ಜಿ.ಎಂ. ಪಾಟೀಲ್, ಗೋಪಾಲ್, ರಂಗನಾಥ್ ಚಕ್ರಪಾಣಿ, ರಾಮಪ್ಪ, ಉಮೇಶ್, ದಿನೇಶ್, ವಿ.ಕೆ.ಚಂದ್ರಶೇಖರ್ ಮೊದಲಾದವರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.