ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪನಂಬಿಕೆ: ಆತಂಕ

Lingaraj Badiger
Updated On : 18 Mar 2013, 10:42 am

ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.17
ಸಾರ್ವಜನಿಕರಲ್ಲಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿರುವುದು ಆತಂಕ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಅಭಿಪ್ರಾಯಪಟ್ಟಿದ್ದಾರೆ.
   ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ಬೆಲೀಫ್ ಮತ್ತು ಪ್ರೊಸಸ್ಸ್‌ರ್ವರ್‌ಗಳ ಕೇಂದ್ರ ಸಂಘ ನಗರದ ಕೆಇಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 6ನೇ ಮಹಾ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.
    ಸಾರ್ವಜನಿಕರು ತಮ್ಮ ಸಮಸ್ಯೆಗಳೊಂದಿಗೆ ನ್ಯಾಯಾಲಯದ ಮೆಟ್ಟಿಲು ಏರಲು ಹಿಂಜರಿಯುತ್ತಿದ್ದಾರೆ. ತೊಂದರೆಗಳನ್ನು ನ್ಯಾಯಾಲಯದ ಮುಂದೆ ಹೇಳಿಕೊಳ್ಳಲು ಇಚ್ಛಿಸದ ಜನರು ನಮ್ಮ ನಡುವೆ ಇದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಬಹು ದೊಡ್ಡ ಸಮಸ್ಯೆಯೊಂದು ಕಾದಿದೆ ಎಂದರು.
ಬೆಲೀಫ್ ಪಾತ್ರ ದೊಡ್ಡದು: ನ್ಯಾಯಾಂಗದ ಕೆಲಸ ಪವಿತ್ರವಾದದ್ದು. ಶಾಸಕಾಂಗ, ಕಾರ್ಯಾಂಗದ ತಪ್ಪನ್ನು ತಿದ್ದುವ ಕೆಲಸ ನ್ಯಾಯಾಂಗ ಮಾಡುತ್ತಿದೆ.
   ಇಂತಹ ಪವಿತ್ರವಾದ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಬೆಲೀಫ್ ಮತ್ತು ಪ್ರೊಸಸ್‌ಗಳಿಗೆ ಅಗತ್ಯ ವೇತನ ನೀಡುವ ಸರ್ಕಾರದಿಂದ ಆಗಬೇಕು. ಅಲ್ಲದೇ, ಕಕ್ಷಿದಾರರನ್ನು ನ್ಯಾಯಾಲಯದ ಮುಂದೆ ಒಪ್ಪಿಸುವಲ್ಲಿಯೂ ಇವರ ಪಾತ್ರ ಮುಖ್ಯವಾಗಿದೆ ಎಂದರು.
  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ. ಭಟ್ ಮಾತನಾಡಿ, ಬೆಲೀಫ್ ಮತ್ತು ಪ್ರೊಸಸ್ ಸರ್ವರ್‌ಗಳಿಗೆ ಸರಿಯಾದ ವೇತನ ನೀಡುವಂತೆ ನ್ಯಾಯಾಲಯಗಳು ಆದೇಶ ನೀಡಿವ ಎಂದರು.
 ಸಮಾವೇಶಕ್ಕೆ ರಾಜ್ಯ 30 ಜಿಲ್ಲೆಗಳಲ್ಲಿನ ಎಲ್ಲಾ ಬೆಲೀಫ್ ಮತ್ತು ಪ್ರೊಸಸ್ ಸರ್ವರ್‌ಗಳ ಸಂಘಗಳಿದ್ದು, ಎಲ್ಲಾ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಲಾಯಿತು.
 ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ರಘುರಾಮ ದೇವಾಡಿಗ, ಬೆಲೀಪ್ ಮತ್ತು ಪ್ರೊಸಸ್ ಸರ್ವರ್‌ಗಳ ಕೇಂದ್ರ ರಾಜ್ಯಾಧ್ಯಕ್ಷ ಎನ್. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಜಿ.ಕೆ. ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಮುರುಳೀಧರ್, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಕೆ. ಹನುಮಂತಯ್ಯ ಮತ್ತಿತರರು ಇದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಇದೇ ವೇಳೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರಿಗೆ ಬೆಲೀಫ್ ಹಾಗೂ ಪ್ರೊಸೆಸ್ ಸರ್ವರ್‌ಗಳ ಸಂಘದ ರಾಜ್ಯ ಘಟಕದ ಸದಸ್ಯರು ಮನವಿ ಸಲ್ಲಿಸಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಬೆಲೀಫ್ ಹಾಗೂ ಪ್ರೊಸೆಸ್ ಸರ್ವರ್‌ಗಳಿಗಾಗಿ ನ್ಯಾಯಾಲಯಗಳಲ್ಲಿ ಪ್ರತ್ಯೇಕ ಕೊಠಡಿ ಒದಗಿಸಬೇಕು, ಶಿಷ್ಟಾಚರದ ಹೆಸರಿನಲ್ಲಿ ತೊಂದರೆಯಾಗುತ್ತಿದ್ದು, ಹೀಗಾಗಿ ಶಿಷ್ಟಾಚಾರದ ವಿಷಯದಲ್ಲಿ ಕೆಲವು ಮಾರ್ಪಾಡು ಮಾಡಬೇಕು, ಆದೇಶ ಜಾರಿಗೆಂದು ಕೆಲವೊಮ್ಮೆ ದೂರದ ಊರುಗಳಿಗೆ ತೆರಳಬೇಕಾಗುತ್ತದೆ. ಇದ್ದರಿಂದ ಕೆಲವೊಮ್ಮೆ ಕಚೇರಿಗೆ ಆಗಮಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಾಜರಾತಿ ಕಡ್ಡಾಯ ಎಂಬ ಆದೇಶವನ್ನು ರದ್ದುಗೊಳಿಸಬೇಕು, ಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡುವಂತೆ ನಮಗೂ ತರಬೇತಿ ನೀಡಬೇಕು, ನಮ್ಮನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳಬಾರದು ಎಂಬ ಬೇಡಿಕೆಗಳನ್ನು ನ್ಯಾಯಾಧೀಶರ ಮುಂದಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement