ಇಂದಿನಿಂದ ಚಂದ್ರಗುತ್ತಿ ಜಾತ್ರೆ
ಸೊರಬ: ಸೋಮವಾರದಿಂದ ಪ್ರಸಿದ್ಧ ಚಂದ್ರಗುತ್ತಿ ಜಾತ್ರೆ ಆರಂಭಗೊಳ್ಳಲಿದೆ. 18ರಂದು ಕಳಶ ಸ್ಥಾಪನೆ, 19 ರ ಮಂಗಳವಾರ ಯಾಗ ಶಾಲೆ ಪ್ರವೇಶ, 20ಕ್ಕೆ ಸಣ್ಣತೇರು, 21ಕ್ಕೆ ಮಹಾ ರಥೋತ್ಸವ, 22ಕ್ಕೆ ಓಕುಳಿ ಸೇವೆ, 23ಕ್ಕೆ ತುಲಾಭಾರ ಹಾಗೂ 27ಕ್ಕೆ ಹೋಳಿ ಹುಣ್ಣಿಮೆ ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳತ್ತ ಸ್ಥಳೀಯ ಆಡಳಿತ ಹಾಗೂ ಜಾತ್ರಾ ಸಮಿತಿ ವಿಶೇಷ ಗಮನ ಹರಿಸಿದೆ. ಇಲ್ಲಿನ ವರದಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಮುಂದಾಗಿದೆ. ಈ ವರ್ಷವೂ ಮಾಜಿ ಶಾಸಕ ಹಾಲಪ್ಪ ಅವರ ಅನ್ನದಾಸೋಹ ಕಾರ್ಯಕ್ರಮ 21ರಂದು ಇರುತ್ತದೆ.