ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾರು ಚಕ್ರ ಸಿಡಿದು ಅಪಘಾತ: ಚಾಲಕ ಸಾವು

Lingaraj Badiger
Updated On : 18 Mar 2013, 10:43 am

ಕ.ಭ. ವಾರ್ತೆ, ಸಾಗರ, ಮಾ.17
ಪಟ್ಟಣಕ್ಕೆ ಸಮೀಪದ ಇಕ್ಕೇರಿಯ ಅಘೋರೇಶ್ವರ ವೃತ್ತದ ಬಳಿ ಕಾರ್‌ನ ಹಿಂದಿನ ಚಕ್ರ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿ ಓರ್ವ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
 ತುಮಕೂರಿನ ಸಿರಾಗೇಟ್‌ನ 9 ಮಂದಿ ಸಿಗಂದೂರಿಗೆ ಹೋಗಿ ಹಿಂತಿರುಗುತ್ತಿದ್ದಾಗ ಅಘೋರೇಶ್ವರ ವೃತ್ತದ ಬಳಿ ವಾಹನದ ಹಿಂದಿನ ಚಕ್ರ ಸಿಡಿದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ವಾಹನ ಚಾಲಕ ಮುರಳಿಧರ (25) ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.
   ಉಳಿದವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಐವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
 ಚಕ್ರ ಸಿಡಿತದಿಂದ ಪಲ್ಟಿ ಹೊಡೆದ ಸ್ಕಾರ್ಪಿಯೋ ವಾಹನ ರಸ್ತೆ ಬದಿಯಲ್ಲಿ ನಿಂತಿದ್ದ ಮಹೇಶ ಎಂಬುವವರಿಗೆ ಡಿಕ್ಕಿ ಹೊಡೆದಿದ್ದು, ಅವರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement