ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕ್ಷೇತ್ರಕ್ಕೆ ಶಕ್ತಿಮೀರಿ ಹಣ ತಂದಿದ್ದೇನೆ

Lingaraj Badiger
Updated On : 18 Mar 2013, 10:32 am

ಹೊಸನಗರ: ರಾಜ್ಯದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು ಇಲ್ಲಿಯ ಪ್ರಗತಿ ದೊಡ್ಡ ಸವಾಲು ಆದರು ಇರುವಂತ ವ್ಯವಸ್ಥೆಯಲ್ಲಿ ಶಕ್ತಿಮೀರಿ ಕ್ಷೇತ್ರಕ್ಕೆ ಹಣ ತಂದಿದ್ದೇನೆ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು.
 ತಾಲೂಕಿನ ಸುಳುಗೋಡು ಗ್ರಾಪಂ ವ್ಯಾಪ್ತಿಯ ರು.25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಂಡ ಕೊರವರಕೇರಿ ರಸ್ತೆ ಉದ್ಘಾಟಿಸಿದ ಅವರು, ಸುಮಾರು 400 ಕೋಟಿ ಹಣ ತಂದಿದ್ದು ಆಧ್ಯತೆ ಮೇಲೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು. ತುಂಗಾ ಮೇಲ್ದಂಡೆ ಯೋಜನೆಯಡಿ ಎರಡು ಹಂತದಲ್ಲಿ ಒಟ್ಟು 46 ಕೋಟಿ ಹಣ ತರಲಾಗಿದ್ದು ರಸ್ತೆ ಅಭಿವೃದ್ಧಿಗೆ ಬಳಸಲಾಗಿದೆ. ಅಲ್ಲದೆ ಇನ್ನು ರು.20 ಕೋಟಿಗೆ ಮನವಿ ಮಾಡಲಾಗಿದ್ದು ಅದು ಬಾಕಿ ಇದೆ ಎಂದರು.
 ಯಾವುದೆ ಪಕ್ಷ ಭೇದವಿಲ್ಲದೆ ಎಲ್ಲರ ಬೇಡಿಕೆಗೆ ಸ್ಪಂದಿಸಿದ್ದೇನೆ. ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಒಬ್ಬ ಶಾಸಕನಾಗಿ ಎಷ್ಟು ಪಾರದರ್ಶಕವಾಗಿ ಮತ್ತು ಮುಕ್ತವಾಗಿ ಇರಬಹುದು ಎಂದು ತೋರಿಸಿ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದರು.
 ಇದೆ ಸಂದರ್ಭದಲ್ಲಿ ಸುಮಾರು ರು.37 ಲಕ್ಷ ವೆಚ್ಚದ ಸುವರ್ಣಗ್ರಾಮ ಯೋಜನೆಯ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು. ತಾಪಂ ಸದಸ್ಯ ಬಿ.ಇ.ಮಂಜುನಾಥ್, ಗ್ರಾಪಂ ಅಧ್ಯಕ್ಷೆ ವಿನುತಾ ಜಗದೀಶ್, ಉಪಾಧ್ಯಕ್ಷೆ ಕಲಾವತಿ ಧರ್ಮರಾಜ್, ಪ್ರಮುಖರಾದ ಎಚ್.ಬಿ. ಕಲ್ಯಾಣಪ್ಪಗೌಡ, ರತ್ನಾಕರಗೌಡ, ಗ್ರಾಪಂ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement