ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಸ್ಪರ್ಧೆ

Lingaraj Badiger
Updated On : 18 Mar 2013, 10:32 am

ಸಾಗರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಸ್ಪರ್ಧಿಸುವುದು ಖಚಿತ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
 ಈಗಾಗಲೇ ಬಿಜೆಪಿಯಿಂದ ದೂರ ಸರಿದಿದ್ದೇನೆ. ಮುಂದೆ ಆ ಪಕ್ಷದಿಂದ ಸ್ಪರ್ಧಿಸುವುದಿಲ್ಲ. ತಮ್ಮ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಬಿಜೆಪಿ ಬಿಟ್ಟು ಇಂಥದೇ ಪಕ್ಷವನ್ನು ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್, ಜೆಡಿಎಸ್ ಸೇರ್ಪಡೆ ಕುರಿತು ಪ್ರಚಾರ ನಡೆದಿದೆಯೇ ಹೊರತು ಅದು ಸತ್ಯ ಅಲ್ಲ. ಮುಂದಿನ 15 ದಿನಗಳೊಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ಕಾಂಗ್ರೆಸ್ ಯಾರೊಬ್ಬರ ಆಸ್ತಿಯೂ ಅಲ್ಲ. ಅದೊಂದು ರಾಷ್ಟ್ರೀಯ ಪಕ್ಷವಾಗಿದ್ದು, ಯಾರು ಬೇಕಾದರೂ ಆ ಪಕ್ಷ ಸೇರಬಹುದು. ಅದಕ್ಕೆ ಯಾರದೋ ಅಪ್ಪಣೆ ಬೇಕಿಲ್ಲ ಎಂದು ಪರೋಕ್ಷವಾಗಿ ತಮ್ಮ ಕಾಂಗ್ರೆಸ್ ಸೇರ್ಪಡೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಒಪ್ಪದಿರುವ ಬಗ್ಗೆ ಪ್ರತಿಕ್ರಿಯಿಸಿದರು.
ರಾಜಕೀಯ ನಿವೃತ್ತಿ: ತಮ್ಮಿಂದ ಭ್ರಷ್ಟಾಚಾರ ನಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಹೇಳಿದ ಶಾಸಕರು ನಮ್ಮಲ್ಲಿ ಗೊಂದಲ ಇದ್ದರೂ ಮತದಾರರಿಗೆ, ಕ್ಷೇತ್ರಕ್ಕೆ ತಾವು ಎಂದಿಗೂ ಅನ್ಯಾಯ ಮಾಡಿಲ್ಲ. ಕೇವಲ ಓಟಿಗಾಗಿ ರಾಜಕಾರಣ ಮಾಡಿಲ್ಲ. ಯಾವುದೇ ಪಕ್ಷಕ್ಕೆ ಹೋದರೂ ಕ್ಷೇತ್ರವನ್ನು ೆ ಅಭಿವೃದ್ಧಿಪಡಿಸಿದ್ದೇನೆ ಎಂದು ಹೇಳಿದರು.
  ನಗರಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರನ್ನು ಅಭಿನಂದಿಸುದಾಗಿ ಹೇಳಿದ ಶಾಸಕರು, ತಮ್ಮ ಅವಧಿಯಲ್ಲಿ ಪಟ್ಟಣದ ಶಾಶ್ವತ ಕುಡಿಯುವ ನೀರಿಗಾಗಿ ಶರಾವತಿ ಹಿನ್ನೀರಿನಿಂದ ನೀರು ತರುವ ಯೋಜನೆ ತಂದುಕೊಡಲಾಗಿದ್ದು, ಈಗಾಗಲೇ ಇದರ ಕಾಮಗಾರಿ ಚಾಲನೆಯಲ್ಲಿದೆ ಎಂದರು.
 ಆರ್.ಸಿ. ಮಂಜುನಾಥ್, ಅದರಂತೆ ಚಂದ್ರಶೇಖರ, ಕಲಸೆ ಚಂದ್ರಪ್ಪ, ಎಂ.ಕೆ. ತಿಮ್ಮಪ್ಪ, ಬಿ.ಆರ್. ವೆಂಕಟೇಶ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement