ಮೆಸ್ಕಾಂ ಜನಸಂಪರ್ಕ ಸಭೆ
ಶಿವಮೊಗ್ಗ: ಮೆಸ್ಕಾಂ ಮಾರ್ಚ್ 19ರಂದು ಬೆಳಿಗ್ಗೆ 10.3.ಕ್ಕೆ ಬಾಲ್‌ರಾಜ್ ಅರಸ್ ರಸ್ತೆಯಲ್ಲರುವ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿದೆ. ಉಪವಿಭಾಗ 1ರ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಹಾಗೂ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಈ ಸಭೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಇಲ್ಲಿನ ಗ್ರಾಹಕರು ಸಭೆಯಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
26ರಂದು ರಥೋತ್ಸವ
ಶಿವಮೊಗ್ಗ: ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಮಾರ್ಚ್ 26ರಂದು ಬೆಳಿಗ್ಗೆ 10.30ಕ್ಕೆ ಗುಡ್ಡೇಕಲ್ ಶ್ರೀ ಬಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯ ರಥೋತ್ಸವ ಏರ್ಪಡಿಸಿದೆ.8ರಂದು ಸಂಜೆ 6ಗಂಟೆಗೆ ಊಂಜಲ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎಂ. ಪುರುಷೋತ್ತಮ ತಿಳಿಸಿದ್ದಾರೆ.
ಡಯಾಲಿಸಿಸ್ ವಿಭಾಗ ಆರಂಭ
ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಡಯಾಲಿಸಿಸ್ ಹಾಗೂ ಯುರೋಲಜಿ ವಿಭಾಗ ಆರಂಭಗೊಂಡಿದೆ. ಆಸ್ಪತ್ರೆಯ ಡಾ. ದಯಾನಂದ್ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ರೋಗಿಗಳಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗಿದ್ದು, ಪ್ರತಿ ನಿತ್ಯ ಬೆಳಿಗ್ಗೆ 7.30ರಿಂದ ಸಂಜೆ 7.30ರವರೆಗೆ ಸೌಲಭ್ಯ ನೀಡಲಾಗಿದೆ. ಕಿಡ್ನಿ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ನಿರ್ದೇಶಕ ಶ್ರೀನಿವಾಸ್ ಎಂ. ಕರೆ ತಿಳಿಸಿದ್ದಾರೆ. ವಿವರಗಳಿಗಾಗಿ-9538921974.
30ರಂದು
ಉಪನಯನ
ಶಿವಮೊಗ್ಗ: ದೈವಜ್ಞ ಬ್ರಾಹ್ಮಣ ಸಂಘ ಮೇ 30ರಂದು ದೈವಜ್ಞ ಕಲ್ಯಾಣ ಮಂದಿರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರಿಗೆ ಉಚಿತ ಸಾಮೂಹಿಕ ಉಪನಯನ ಹಮ್ಮಿಕೊಂಡಿದೆ. ಆಸಕ್ತರು ಕಲ್ಯಾಣ ಮಂದಿರದ ಮೇ. 10ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಸಂಘದ ಅಧ್ಯಕ್ಷ ಸುಬ್ರಾಯ ಶೇಟ್, ಕಾರ್ಯದರ್ಶಿ ಇತರಿದ್ದರು.