ಹೆಣ್ಣು ಮಕ್ಕಳ ರಕ್ಷಣೆಗೆ ಕಠಿಣ ಕಾಯ್ದೆ ಅಗತ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.16
ಲೈಗಿಂಕ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ರಕ್ಷಣೆಗಾಗಿ ನೂತನ ಕಾಯ್ದೆ ಜಾರಿಗೊಳಿಸಿದ್ದು, ಕೃತ್ಯ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜೆಎಂಎಫ್ಸಿ 2ನೇ ಅಡಿಷನಲ್ ಮತ್ತು ಸಿವಿಲ್ ನ್ಯಾಯಾಧಿಶ ಬಿ. ವಿಜಯಕುಮಾರ್ ಹೇಳಿದರು.
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ “ÔÚ¦ÔÚÁæ¾Úß ಲೈಂಗಿಕ ದೌರ್ಜನ್ಯ - ಮನೋಸಾಮಾಜಿಕ ÑÚÈÚßÑæÀ’ ಕುರಿತ ವಿಚಾರ ಸಂಕಿರಣದಲ್ಲಿ ಅವರು, ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಮಕ್ಕಳ ರಕ್ಷಣೆಗಾಗಿ ಕಾಯ್ದೆ ತಿದ್ದುಪಡಿ ಮಾಡಲಾಗಿದ್ದು, ಈ ಪ್ರಕಾರ ದೌರ್ಜನ್ಯಕ್ಕೊಳಗಾದ ಯುವತಿಯ ವಿಳಾಸ, ಹೆಸರು, ಶಾಲೆ, ಪೋಷಕರ ಗುರುತನ್ನು ಪೊಲೀಸ್ ಅಧಿಕಾರಿಗಳು ಗೌಪ್ಯವಾಗಿಡಬೇಕು ಎಂದರು.
ಕೃತ್ಯಕ್ಕೊಳಗಾದ ಮಹಿಳೆ ಮತ್ತು ಕುಟುಂಬ ಸದಸ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದ ಅವರು, ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಯುವಜನತೆ ಹೆಚ್ಚು ಕ್ರಿಯಾಶೀಲರಾಗಬೇಕು ಎಂದರು.
ಆತ್ಮಸ್ಥೈರ್ಯ ಅಧಿಕ: ಹೆಣ್ಣು ಮಕ್ಕಳು ಜ್ಞಾನದಾಯಿಗಳಾದಾಗ ಮಾತ್ರ ಇಂತಹ ಕೃತ್ಯ ಖಂಡಿಸಬಹುದು. ಆತ್ಮಸ್ಥೈರ್ಯದಿಂದ ಮಹಿಳೆ ಸಬಲೆಯಾಗಬೇಕು. ಅಲ್ಲದೇ, ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಲೈಂಗಿಕ ಶೋಷಣೆಗಳು ತಪ್ಪಬೇಕಿದೆ. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ.
ಅದರೊಂದಿಗೆ ಕಾನೂನು ನೆರವು ಪಡೆದು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ತಪ್ಪಿಸಬೇಕು ಎಂದರು.
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ. ಜಯದೇವಪ್ಪ, ಕುವೆಂಪು ವಿ.ವಿ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಡಾ. ಬಿ.ಎಸ್. ಗುಂಜಾಳ್, ಕ್ಷೇಮ ಟ್ರಸ್ಟ್ನ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್, ಸಮನ್ವಯ ಟ್ರಸ್ಟ್ ಕಾರ್ಯದರ್ಶಿ ಕಾಶಿನಾಥ್ ಮೊದಲಾದವರು ಇದ್ದರು.