ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಅನುದಾನದಲ್ಲಿ ಅನ್ಯಾಯ'

Lingaraj Badiger
Updated On : 19 Mar 2013, 10:44 am

ಸಾಗರ: ಈ ಸಾಲಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ 60 ಲಕ್ಷ ರು. ಬಿಡುಗಡೆ ಮಾಡಿದೆ. ಆದರೆ ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿ ಬರಪೀಡಿತ ಪ್ರದೇಶ ಎಂದು ಸರ್ಕಾರದ ಪಟ್ಟಿಯಲ್ಲಿ ಸೇರಿರುವ ಆನಂದಪುರಂ ಹೋಬಳಿಗೆ ಹೆಚ್ಚಿನ ಅನುದಾನ ನೀಡದೆ ಮೋಸ ಮಾಡಿದೆ ಎಂದು ತಾಪಂ ಸದಸ್ಯೆ ಜ್ಯೋತಿ ಮುರಳಿಧರ್ ಆರೋಪಿಸಿದ್ದಾರೆ.  ಕಳೆದ ಮಳೆಗಾಲದಲ್ಲಿ ಆನಂದಪುರಂ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆ ಬೀಳದೆ ರೈತರು ಆತಂಕದಲ್ಲಿದ್ದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಈ ಹೋಬಳಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಹೋಬಳಿಗೆ ಸೂಕ್ತ ಸೌಲಭ್ಯ  ನೀಡಿಲ್ಲ ಎಂದು ದೂರಿದ್ದಾರೆ.  ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಜನರ ಅಹವಾಲಿಗೆ ಸ್ಪಂದಿಸಬೇಕು ಎಂದು ಜ್ಯೋತಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement