ದೈನಂದಿನ ಚಟುವಟಿಕೆ ಆರೋಗ್ಯಕರವಾಗಿರಲಿ
ಸೊರಬ: ಪ್ರಸ್ತುತ ನಾವು ಅಳವಡಿಸಿಕೊಂಡಿರುವ ದೈನಂದಿನ ಚಟುವಟಿಕೆಗಳು ನಮ್ಮ ಆರೋಗ್ಯ ಸ್ಥಿತಿ ಹದಗೆಡಿಸಿದೆ ಎಂದು ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಶ್ರೀಗಳು ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಶಾಮಿಯಾನ, ಸೌಂಡ್ ಸಿಸ್ಟಂ, ಲೈಟಿಂಗ್, ಡೆಕೋರೇಟರ್ಸ್ ಮಾಲಿಕರ ಸಂಘದ ಉದ್ಘಾಟನೆ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು. ಪಟ್ಟಣದ ಸಂತ ಸಬಾಸ್ಟಿಯನ್ ಚರ್ಚ್ ಫಾದರ್ ರೊನಾಲ್ಡ್ ಡಿ. ಕುನ್ಹಾ, ಇಮಾಮ್ ಖತೀಬ್ ಜಾಮಿಯಾ ಮಸ್ಜಿದ್ ಜನಾಬ್ ಮೌಲಾನಾ ರಿಯಾಝ್ ಅಹ್ಮದ್, ವಕೀಲ ದಿನಕರ ಭಾವೆ, ಡಾ. ನಾಗೇಂದ್ರಪ್ಪ ಮಾತನಾಡಿದರು. ಸಂಘದ ಅಧ್ಯಕ್ಷ ಈರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಭಾಕರ್ ಆನವಟ್ಟಿ, ನಿರ್ದೇಶಕ ಶಿವಬಸವಯ್ಯ, ಎಚ್.ಎಸ್. ಮಂಜಪ್ಪ, ಗಣಪತಿ, ಪ್ರಶಾಂತ ಮೇಸ್ತ್ರಿ, ಯೂಸೂಫ್ ಸಾಬ್, ಶ್ರೀಪಾದರಾವ್ ನಿಸರಾಣಿ ಇದ್ದರು.