ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದ್ವಿಚಕ್ರ ವಾಹನ ಕಳವು ಪ್ರಕರಣ: ನಾಲ್ವರ ಬಂಧನ

Lingaraj Badiger
Updated On : 19 Mar 2013, 10:39 am

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.18
ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆ  ಪೊಲೀಸರು 4 ಜನರನ್ನು ಬಂಧಿಸಿದ್ದು, ಆರೋಪಿಗಳಿಂದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಿ.ಬೀರನಹಳ್ಳಿ ಗ್ರಾಮದ ಸಿದ್ದೇಶಿ (32), ಹೊಳೆಹೊನ್ನೂರಿನ ಇಮ್ರಾನ್ ಖಾನ್ (22), ಉಮೇಶ್ (31), ಹಾಡೋನಹಳ್ಳಿ ಗ್ರಾಮದ ಸುರೇಶ್(30) ಬಂಧಿತ ಆರೋಪಿಗಳು. ಕೋಟೆ ವೃತ್ತ ಠಾಣೆಯ ಸಿಪಿಐ ಜಯರಾಜ್ ಅವರ ನೇತೃತ್ವದಲ್ಲಿ ಪಿಎಸ್‌ಐವಿ ಚನ್ನಪ್ಪ,  ಪಿಎಸ್‌ಐ ರಾಘವೇಂದ್ರ, ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಇರುವ ಪ್ರತ್ಯೇಕ ತಂಡ ರಚಿಸಿ ಕಳ್ಳರ ಪತ್ತೆ ಮಾಡಲು ನಿಯೋಜಿಸಲಾಗಿತ್ತು. ಕಾರ್ಯಪ್ರವೃತ್ತರಾದ ತಂಡ 4 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement