ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪದಾಧಿಕಾರಿ ಆಯ್ಕೆ

Lingaraj Badiger
Updated On : 19 Mar 2013, 10:39 am

ಶಿವಮೊಗ್ಗ: ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ. ಬಿ.ವಿ. ಗೋಪಾಲಕೃಷ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟಿ.ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಕೆ.ಎಸ್. ಗಂಗಾಧರಪ್ಪ, ಡಿ.ಎಂ. ರಾಮಯ್ಯ, ಎಸ್.ಎಚ್. ಪಂಕಜಾಕ್ಷಿ, ಪಿ.ಸಿ. ಜಯ, ಪೂರ್ಣಿಮಾ ಚಂದ್ರಶೇಖರ್, ಎಸ್.ವಿ. ನರಸಿಂಹಮೂರ್ತಿ, ಎಚ್.ಎನ್. ಅನಂತರಾಮ ಅಯ್ಯಂಗಾರ್ ಅವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಪಿ.ಸಿ. ಜಯ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ಬೇಸಿಗೆಯ ಬಿಸಿಲಿನಿಂದಾಗಿ ಗೃಹಬಳಕೆ, ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ವಿದ್ಯುತ್ ಜಾಲದಲ್ಲಿನ ಉತ್ಪಾದನೆ ಮತ್ತು ಬೇಡಿಕೆಯಲ್ಲಿನ ಕೊರತೆಯಿಂದಾಗಿ ಮುಖ್ಯ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ವಿದ್ಯುತ್ ಹಂಚಿಕೆಯಾಗುತ್ತಿದ್ದು, ವಿದ್ಯುತ್ ಕಡಿತ ಅನಿವಾರ್ಯವಾಗುತ್ತಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂನ ಪಾಲನೆ, ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement