ಕ್ರೀಡೆಗಳು ಮಾನಸಿಕ ಸಮತೋಲನಕ್ಕೆ ಸಹಕಾರಿ
ಜೋಗ್ಫಾಲ್ಸ್ ಮಾ. 19
ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಕ್ರೀಡೆಗಳು ಮಾನಸಿಕ ಸಮತೋಲನಕ್ಕೆ ಸಹಕಾರಿ ಎಂದು ಜೋಗ್ ಕಾರ್ಗಲ್ ಪಪಂ ಅಧ್ಯಕ್ಷ ಕೆ.ಸಿ. ಹರೀಶ್ಗೌಡ ತಿಳಿಸಿದರು.
ಕೆಪಿಸಿ ಮಹಿಳಾ ಉದ್ಯೋಗಿಗಳ ಸಂಘ ಮತ್ತು ಶರಾವತಿ ಮಹಿಳಾ ಸಂಘದ ಆಶ್ರಯದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ಕ್ರೀಡೆ ಶಾಂತಿಯ ಸಂಕೇತವಾಗಿದ್ದು, ಕ್ರೀಡೆಯಿಂದ ಶಾಂತಿ-ನೆಮ್ಮದಿ ಸಾಧ್ಯ. ವೈರತ್ವವನ್ನು ಓಡಿಸುವ ಶಕ್ತಿ ಕ್ರೀಡೆಗಿದೆ. ಯಾಂತ್ರಿಕ ಜೀವನದಿಂದ ಬೇಸತ್ತ ದುಡಿದ ಜೀವಕ್ಕೆ ಲವಲವಿಕೆಯಾಗಿರಲು ಕ್ರೀಡೆಗಳಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ನಿಗಮದ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ಮಾತನಾಡಿದರು. ಬಿ. ನಿಜೇಂದ್ರ, ಎಚ್.ಎಸ್. ಹರೀಶ್, ಸಿದ್ದಯ್ಯ ಗುರುಸಿದ್ದಯ್ಯ, ಲಕ್ಷ್ಮೀ ರಾಜು, ಎಲ್. ವಿಜಯಮ್ಮ ಇದ್ದರು.