ಗುರುಗುಹ ಸಂಗೀತ ಭವನಕ್ಕೆ ಶಂಕುಸ್ಥಾಪನೆ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ. 19
ನಗರದ ಗುರುಗುಹ ಸಂಗೀತ ಮಹಾವಿದ್ಯಾಲಯ ಶೇಷಾದ್ರಿಪುರಂನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಂಗೀತ ಭವನಕ್ಕೆ ಸೋಮವಾರ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಕಳೆದ ಮೂರು ದಶಕಗಳಿಂದ ಸಂಗೀತ ಸೇವೆಯಲ್ಲಿ ತೊಡಗಿಕೊಂಡಿರುವ ಗುರುಗುರ ಸಂಗೀತ ಮಹಾವಿದ್ಯಾಲಯವು ಸಂಗೀತ ಭವನ ನಿರ್ಮಾಣಕ್ಕೆ ಹೊರಟಿರುವುದು ಶ್ಲಾಘನೀಯ. ಈ ಸಂಸ್ಥೆಯ ಕಾರ್ಯ ಯಶಸ್ವಿಯಾಗಿ ಮುಂದುವರಿಯಲಿ ಎಂದು ಇದೇ ಸಂದರ್ಭದಲ್ಲಿ ಈಶ್ವರಪ್ಪ ಹಾರೈಸಿದರು.
ನಾಧಸುಧಾ ಅಧ್ಯಕ್ಷ ಡಾ.ಬಿ. ವೆಂಕಟರಾವ್, ಅಭಿರುಚಿ ಸಂಸ್ಥೆ ಅಧ್ಯಕ್ಷ ಡಾ. ಶಿವರಾಮಕೃಷ್ಣ, ಗುರುಗುಹ ವಾಗ್ಗೇಯ ಪ್ರತಿಷ್ಠಾನದ ಅಧ್ಯಕ್ಷೆ ಸರಸ್ವತಮ್ಮ, ಗುರುಗುಹ ಮಹಾವಿದ್ಯಾಲಯದ ಪ್ರಾಂಶುಪಾಲ ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್, ವಿ.ಎಸ್. ರಂಗನಾಥ್, ರವೀಂದ್ರ ನಗರ ಗಣಪತಿ ದೇವಾಲಯದ ವೇ.ಅ.ಪ. ರಾಮಭಟ್, ಸತ್ಯನಾರಾಯಣ ಮತ್ತಿತರರು ಹಾಜರಿದ್ದರು.