ಸುದ್ದಿ ಸಂಕ್ಷೇಪ
ಇಂದು ಇಕ್ಕೇರಿ ರಥೋತ್ಸವ
ಸಾಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಇಕ್ಕೇರಿಯ ಶ್ರೀ ಅಘೋರೇಶ್ವರ ದೇವರ ಮಹಾ ರಥೋತ್ಸವವು ಮಾ.20ರಂದು ನಡೆಯಲಿದೆ. ಅಂದು ಮಧ್ಯಾಹ್ನ 12-30ಕ್ಕೆ ಶ್ರೀ ಅಖಿಲಾಂಡೇಶ್ವರಿ ಸಹಿತ ಶ್ರೀ ಅಘೋರೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದ್ದು, ನಂತರ ರಾಜಬೀದಿ ಉತ್ಸವ ನಡೆಯಲಿದೆ. ರಥೋತ್ಸವ ಅಂಗವಾಗಿ ಮಾ. 20ರಂದು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಾ.21ರಂದು ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಕಾರ್ಯಾಗಾರ
ಸಾಗರ: ಧಾರವಾಡದ ವಿದ್ಯಾಪೋಷಕ್, ತಾಲೂಕು ಸರ್ಕಾರಿ ನೌಕರರ ಸಂಘ, ಬೆಂಗಳೂರಿನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಜೋಷಿ ಫೌಂಡೇಶನ್ ಆಶ್ರಯದಲ್ಲಿ ಪಿಯುಸಿ ನಂತರ ಮುಂದೇನು ಕುರಿತು ಉಚಿತ ಮಾಹಿತಿ ಕಾರ್ಯಾಗಾರ ಮಾ.29ರಂದು ಬೆಳಗ್ಗೆ 10ಕ್ಕೆ ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾ.25ರೊಳಗೆ ಹೆಸರು ನೋಂದಾಯಿಸಿಕೊಳ್ಳುವ 200 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದೆ. ಮಾಹಿತಿಗಾಗಿ 9448238679 ಅಥವಾ 9448721572 ಸಂಪರ್ಕಿಸಲು ಕೋರಲಾಗಿದೆ.