ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ

Lingaraj Badiger
Updated On : 21 Mar 2013, 10:59 am

ಶಿವಮೊಗ್ಗ: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ವಾರ್ತಾ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಹಾಗೂ ಜಿಲ್ಲಾ ಬಳಕೆದಾರರ ವೇದಿಕೆ ಸಂಯುಕ್ತಾಶ್ರಯದಲ್ಲಿ ಮಾರ್ಚ್ 21ರಂದು ಬೆಳಿಗ್ಗೆ 10ಗಂಟೆಗೆ ನಗರದ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಭಾಂಗಣದಲ್ಲಿ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಶೆಟ್ಟರ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಟಿ.ನಂಜಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ವಾರ್ತಾಧಿಕಾರಿ ಜಿ. ಹಿಮಂತರಾಜು, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಂ.ಎನ್. ಹಿಪ್ಪರಗಿ ಹಾಗೂ ಆಹಾರ ಇಲಾಖೆ ಉಪನಿರ್ದೇಶಕ ಡಿ.ಆರ್. ವಿಶ್ವನಾಥ್ ಉಪಸ್ಥಿತರಿರುವರು.
ಅಹವಾಲು ಸ್ವೀಕಾರ
ಶಿವಮೊಗ್ಗ: ಕಾರ್ಮಿಕ ಇಲಾಖೆಯು ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಅನುಷ್ಠಾನ ಕುರಿತಂತೆ ಕುರಿತಂತೆ ದೂರು ಅಥವಾ ಅಹವಾಲುಗಳಿದ್ದಲ್ಲಿ, ಸಾರ್ವಜನಿಕರು, ಯೋಜನೆಯ ಫಲಾನುಭವಿಗಳು ಅಥವಾ ಈ ಯೋಜನೆಯಡಿ ನೋಂದಣಿಯಾದ ಆಸ್ಪತ್ರೆಯವರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು. ದೂರುದಾರರು ತಮ್ಮ ಸಮಸ್ಯೆಗಳನ್ನು ಖುದ್ದಾಗಿ ಅಥವಾ ದೂರವಾಣಿ ಮೂಲಕವೂ ದಾಖಲಿಸಬಹುದಾಗಿದೆ. ಈ ಕುರಿತು ದೂರುಗಳನ್ನು ದಾಖಲಿಸಲು ಹಾಗೂ ಮಾಹಿತಿ ಪಡೆದುಕೊಳ್ಳಲು ಕಾರ್ಮಿಕ ಅಧಿಕಾರಿಯನ್ನು ಸಂಪರ್ಕಿಸಬಹುದು. ದೂ.ಸಂ.08182-222940.
26ರಂದು ಅಂಚೆ ಅದಾಲತ್
ಶಿವಮೊಗ್ಗ: ಶಿವಮೊಗ್ಗ ವಿಭಾಗದ ಅಂಚೆ ಇಲಾಖೆಗಳ ಅಧೀಕ್ಷಕರು ಮಾರ್ಚ್ 26ರಂದು ಬೆಳಗ್ಗೆ 10 ಗಂಟೆಗೆ ತಮ್ಮ ಕಚೇರಿ ಸಭಾಂಗಣದಲ್ಲಿ ಅಂಚೆ ಸೇವೆಗಳ ಕುರಿತು ಅಂಚೆ ಅದಾಲತ್ ಏರ್ಪಡಿಸಿದ್ದಾರೆ. ಈ ಸಭೆಯಲ್ಲಿ ಸಾರ್ವಜನಿಕರು ಹಾಗೂ ಅಂಚೆ ಗ್ರಾಹಕರು ತಮ್ಮ ದೂರುಗಳನ್ನು ಮಾರ್ಚ್ 24ರೊಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಹಾಗೂ ಖುದ್ದಾಗಿ ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿ, ಸಮಸ್ಯೆಗೆ ಪರಿಕಾರ ಕಂಡುಕೊಳ್ಳುವಂತೆ ಅಂಚೆ ಇಲಾಖೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಆಯನೂರಿನಲ್ಲಿ ಧಾರ್ಮಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಮಾ.20
ಆಯನೂರಿನ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯ ಹಾಗೂ ಧರ್ಮಶ್ರೀ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾರ್ಚ್ 22ರಿಂದ 24ರವರಗೆ ಮೂರು ದಿನ ವಾರ್ಷಿಕ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 22ರಂದು ಬೆಳೆಗ್ಗೆ 6.45 ಕ್ಕೆ ಕುಡಿ ಪೂಜೆ, ಧ್ವಜಾರೋಹಣ 8 ಗಂಟೆಗೆ ಬ್ರಹ್ಮಕೂರ್ಚ ಹೋಮ, ದೇವಾನಾಂದಿ, ಕೂಷ್ಮಾಂಡ ಹೋಮ, ಪ್ರಧಾನ ಸಂಕಲ್ಪ, ಗಣಪತಿ ಹೋಮ, ರಾತ್ರಿ ಮಂಗಳಾರತಿ ಪ್ರಸಾದ ವಿತರಣೆ ಏರ್ಪಡಿಸಲಾಗಿದೆ.
 ಮಾರ್ಚ್ 23ರಂದು ಬೆಳಿಗ್ಗೆ 8ಗಂಟೆಗೆ ಗಣಹೋಮ, ರುದ್ರ ಹೋಮ, ನವಗ್ರಹ ಹೋಮ, ಕಾಲಭೈರವ ಹೋಮ, ಬಲಿ ಪೂಜೆ, ಮಧ್ಯಾಹ್ನ ಮಂಗಳಾರತಿ, ಸಂಜೆ 6ಕ್ಕೆ ಬ್ರಹ್ಮಕಲಶ ಸ್ಧಾಪನೆ, ರಂಗ ಪೂಜೆ, ಅಷ್ಠಾವಧಾನ ಪೂಜೆ, ಮಾರ್ಚ್ 24ರಂದು ಬೆಳೆಗ್ಗೆ 8 ಕ್ಕೆ ಬ್ರಹ್ಮಕಳಸ ಅಭಿಷೇಕ, ಸಂಜೆ 6ಕ್ಕೆ ಸುಬ್ರಹ್ಮಣ್ಯ ಹೋಮ, ಆಶ್ಲೇಷ ಬಲಿಪೂಜೆ, ಕುಡ್ತೆ ಬಲಿ, 10.30ಕ್ಕೆ ಗ್ರಾಮದ ಸುತ್ತಮುತ್ತಲಿನ ದೇವರುಗಳ ಉತ್ಸವ ಮೂರ್ತಿಗಳ ಸಂಗಮದ ಜೊತೆಗೆ ಸಿದ್ದೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
ಚಿಕ್ಕಮಗಳೂರಿನ ಗುರುದತ್ತ ಷೋಡಶಿ ಸೇವಾಶ್ರಮದ ಆರ್ಚಕ ಶ್ರೀ ದತ್ತ ಚೈತನ್ಯ ಸ್ವರೂಪ ಶ್ರೀ ಅಶೋಕ ಗಣಪತಿ ಶರ್ಮ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಹೋತ್ಸವದ ಎರಡು ದಿನಗಳು ಸಹ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಧರ್ಮಶ್ರೀ ಸೇವಾ ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement