ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಡಿತರ ಚೀಟಿ ಸರಳೀಕರಣಕ್ಕೆ ಆಗ್ರಹ

Lingaraj Badiger
Updated On : 21 Mar 2013, 10:59 am

ಕ.ಪ್ರ.ವಾರ್ತೆಶಿವಮೊಗ್ಗ  ಮಾ.20
ಪಡಿತರ ಚೀಟಿ ಪಡೆಯಲು ಹೊಸ ಸರಳೀಕರಣ ವ್ಯವಸ್ಥೆ ಜಾರಿ ಮಾಡುವಂತೆ ಒತ್ತಾಯಿಸಿ ವಿಧಾನಸಭಾ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಪಡಿತರ ಚೀಟಿ ಪಡೆಯಲು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಅಲ್ಲದೇ, ಈ ವ್ಯವಸ್ಥೆಯಿಂದ ಸರಿಯಾದ ದಾಖಲೆಗಳನ್ನು ನೀಡಿದರೂ ಕೂಡ, ಸ್ಥಳೀಯರನ್ನು ಗುರುತಿಗಾಗಿ ಕರೆದೊಯ್ಯದಿದ್ದರೆ ಪಡಿತರ ಚೀಟಿ ಪ್ರಕ್ರಿಯೆ ಮಾಡುತ್ತಿಲ್ಲ. ಇಂತಹ ವ್ಯವಸ್ಥೆಯಿಂದ ನಾಗರೀಕರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಕಂಪನಿ ಖಾಯಂ ಪಡಿತರ ಕಾರ್ಡ್ ನೀಡುವ ಸಂದರ್ಭದಲ್ಲಿ ಫೋಟೋ, ಬೆರಳಚ್ಚು, ಬಯೋವುಟ್ರಿಕ್ ಪಡೆದಿದ್ದು, ತಾಂತ್ರಿಕವಾಗಿ  ದೋಷಪೂರಿತವಾಗಿದೆ. ಅದನ್ನು ಪುನಃ ಪರಿಶೀಲಿಸಿ ಹೊಸ ಪಡಿತರ ಕಾರ್ಡ್ ವಿತರಣೆ ಮಾಡುವಂತೆ ಸರ್ಕಾರವೇ ತಿಳಿಸಿದ್ದು, ಕಳೆದ ಬಾರಿ ಪಡಿತರ ಚೀಟಿಗಾಗಿ ಹಣ ಪಾವತಿ ಮಾಡಿದಲ್ಲದೇ ಈ ಬಾರಿಯು 50 ನೀಡಬೇಕಿದೆ. ಕೂಡಲೇ ಈ ಪದ್ದತಿ ರದ್ದು ಮಾಡಬೇಕು. ಈ ಹಣವನ್ನು ಸರ್ಕಾರವೇ ಭರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಡಿತರ ಚೀಟಿ ನೀಡುವಲ್ಲಿ ಸರ್ಕಾರ ಹೀಗೆ ದಿನಕ್ಕೊಂದು ಹೊಸ ವ್ಯವಸ್ಥೆಯನ್ನು ಜಾರಿಗೆ ಮಾಡುತ್ತಿದ್ದರೆ ರಾಜ್ಯ ಯುವ ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ. ರಂಗನಾಥ್, ಉಪಾಧ್ಯಕ್ಷ ಟಿ.ವಿ. ರಂಜಿತ್, ಪ್ರಧಾನ ಕಾರ್ಯದರ್ಶಿ ನಾಸಿರ್ ಖಾನ್, ಎಚ್.ಪಿ.ಗಿರೀಶ್, ಎಂ.ಪ್ರವೀಣ್, ಆರ್.ಕಿರಣ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement