ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮದ್ಯದಂಗಡಿಗೆ ಅವಕಾಶವಿಲ್ಲ

Lingaraj Badiger
Updated On : 21 Mar 2013, 11:10 am

ಕ.ಪ್ರ. ವಾರ್ತೆ,ಹೊಸನಗರ,ಮಾ.20
ರಾಜ್ಯದಲ್ಲಿ ಹೊಸದಾಗಿ 1000 ಮದ್ಯದಂಗಡಿ ಮಂಜೂರಾತಿ ಮಾಡಲು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಯತ್ನಿಸುತ್ತಿದ್ದು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಎಚ್ಚರಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಆಯೋಜಿಸಿದ್ದ ಮಹಿಳಾ ಜಾಗೃತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹೊಸದಾಗಿ ಮಂಜೂರಾತಿ ನೀಡಿದ್ದೆ ಆದಲ್ಲಿ ಮಹಿಳೆಯರನ್ನು ಸಂಘಟಿಸಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮಹಿಳೆಯರನ್ನು ದೇಶದ ಪ್ರಧಾನಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಯನ್ನಾಗಿ ಮಾಡಿದ ಮಾತ್ರಕ್ಕೆ ಮಹಿಳಾ ಸಬಲೀಕರಣ ಆಗುವುದಿಲ್ಲ. ಅಡಿಕೆ ಸುಲಿದು, ಹೊಲದಲ್ಲಿ ಕಳೆ ಕಿತ್ತು, ಕುಡುಕ ಗಂಡನನ್ನು ಸುಧಾರಿಸುತ್ತಾ ಬದುಕುತ್ತಿರುವ ಮಹಿಳೆಯರ ಹಸನಾದಾಗ ಮಾತ್ರ ಸಬಲೀಕರಣ ಆಗಿದೆ ಎನ್ನಲು ಸಾಧ್ಯ ಎಂದರು.
ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಸಹಕಾರಿ ಕ್ಷೇತ್ರ ಶ್ರಮ ಬಹಳಷ್ಟಿದೆ. ಮಹಿಳೆಯರು ಕೂಡ ತಮ್ಮ ಹಕ್ಕಿಗಾಗಿ ಹೋರಾಡುವ ಮನಸ್ಥಿತಿ ಹೊಂದಬೇಕು ಎಂದರು.
ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಇಂದಿನ ಬದುಕು ಬವಣೆ ಕುರಿತು ಮಾಹಿತಿ ನೀಡಿದರು. ಮಹಿಳಾ ಸಾಧಕಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹಾಲಿ ಮಾಜಿಗಳ ವಿರುದ್ಧ ವಾಗ್ದಾಳಿ: ತಮ್ಮ ಅಧಿಕಾರದವಧಿಯಲ್ಲಿ ಮಹಿಳೆಯರಿಗಾಗಿ ಏನುಮಾಡದ ತೀರ್ಥಹಳ್ಳಿ ಕ್ಷೇತ್ರದ ಹಾಲಿ ಮಾಜಿ ಶಾಸಕರು ನಮ್ಮ ಕಾರ್ಯಕ್ರಮದ ಬಗ್ಗೆ ಟೀಕಿಸುತ್ತಿರುವುದು ಅವರ ಅಸಹಾಯಕತೆಯನ್ನು ಬಿಂಬಿಸುತ್ತದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ವಾಗ್ದಾಳಿ ನಡೆಸಿದರು.
ಮಾಸ್ತಿಕಟ್ಟೆಯ ಮಹಿಳಾ ಸಮಾವೇಶದಲ್ಲಿ, ಸಹೋದರಿಯರನ್ನು ಹೊಂದಿರದ ನಾನು ಮಹಿಳೆಯರನ್ನು ಸಹೋದರಿಯರಂತೆ ಗೌರವಿಸಿ ಭಾರತೀಯ ಸಂಸ್ಕೃತಿಯಂತೆ ಸೀರೆ ನೀಡಿ ಗೌರವಿಸುತ್ತಿರುವುದು ಸತ್ಯ.
ಅದಕ್ಕಾಗಿ ಯಾವುದೆ ಭ್ರಷ್ಟಾಚಾರ ನಡೆಸಿಲ್ಲ. ಯಾವುದೆ ಕಮೀಷನ್‌ನಿಂದ ಸೀರೆ ನೀಡಿಲ್ಲ. ನನ್ನ ಟಿಎಡಿಎ ಉಳಿಸಿ ಅದರಲ್ಲಿ ಸೇವೆ ಮಾಡುತ್ತಿದ್ದೇನೆ. ಯಾರೋ ಹೇಳಿದ ಮಾತ್ರಕ್ಕೆ ನಾನು ಅಂಜುವ ವ್ಯಕ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ಅಂಜಲಿ ಅಶ್ವಿನ್, ಸುಷ್ಮಾಸಂಜಯ್, ರೋಜಾ ಫರ್ನಾಂಡೀಸ್, ಸಚೀಂದ್ರಹೆಗಡೆ, ದೊಡ್ಲೆಪಾಲ್ ಚಂದ್ರಶೇಖರ್, ಎನ್.ಆರ್. ದೇವಾನಂದ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement